ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಎಜೆಂಟರು ನಿಯಮ ಬಾಹಿರವಾಗಿ ಫಲಾನುಭವಿಗಳಿಂದ ಹೆಚ್ಚಿನ ಹಣ ಪಡೆದು ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡಗಳನ್ನು ವಿತರಿಸುತ್ತಿದ್ದಾರೆ ಎಂದು ಸ್ವತಃ ಆರೋಗ್ಯ ಇಲಾಖೆಯೇ ಹೇಳಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಏಜೆಂಟರಗಳಿಂದ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡಗಳನ್ನು ಪಡೆಯಬಾರದೆಂದು ತಿಳಿಸಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು ಈ ಯೋಜನೆಯಡಿ ಎಲ್ಲ ಬಿಪಿಎಲ್ ಕಾರ್ಡ ಹೊಂದಿರುವ ಬಡವರಿಗೆ ಉಚಿತವಾಗಿ ಹಾಗೂ ಎಪಿಎಲ್ ಕಾರ್ಡ ಹೊಂದಿದವರಿಗೆ ಶೇಕಡಾ ೩೦% ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ ವತಿಯಿಂದ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಈ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡ ಕಡ್ಡಾಯವಿರುವದಿಲ್ಲ. ರೋಗಿಯು ತಮ್ಮ ಪಡಿತರ ಚೀಟಿ ಮತ್ತು ಆಧಾರ ಕಾರ್ಡ ಸಲ್ಲಿಸಿ ಸೇವೆ ಪಡೆಯಬಹುದು, ಆದಾಗ್ಯೂ ಕೂಡಾ ಯೋಜನೆಯ ಸೇವೆಗಳು ಸುಲಲಿತವಾಗಿ ಹಾಗೂ ಸರಳಿಕೃತವಾಗಿ ಪಡೆಯಲು ಂಃ-ಂಡಿಞ ಕಾರ್ಡಗಳನ್ನು ವಿತರಿಸಲಾಗುತ್ತದೆ, ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ, ೯ ತಾಲೂಕಾ ಆಸ್ಪತ್ರೆಗಳು ಹಾಗೂ ೧೬ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೂ.೧೦ ಶುಲ್ಕದೊಂದಿಗೆ ಬಿಳಿ (ಂ೪) ಹಾಳೆಯ ಮೇಲೆ ಮಾಹಿತಿಯನ್ನು ಮುದ್ರಿಸಿ ನೀಡಲಾಗುತ್ತಿದೆ, ಸಾರ್ವಜನಿಕರ ಅನೂಕಲಕ್ಕಾಗಿ ಸರ್ಕಾರಿ ಸ್ವಾಮ್ಯದ ಬೆಳಗಾವಿ ಕೆ.ಒನ್-೪ ಹಾಗೂ ೯೫ ಸೇವಾಸಿಂದೂ ಕೇಂದ್ರಗಳ ಮುಖಾಂತರ ರೂ.೧೦ ಶುಲ್ಕದೊಂದಿಗೆ ಬಿಳಿ (ಂ೪) ಹಾಳೆಯ ಮೇಲೆ ಅಥವಾ ರೂ.೩೫ ಶುಲ್ಕದೊಂದಿಗೆ ಎಬಿ-ಆರ್ಕ್ ಕಾರ್ಡಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ