ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗ್ರಾಮೀಣ ಮತಕ್ಷೇತ್ರದ ಕರ್ಲೆ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಗ್ರಾಮದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಒಲೆ ಹಾಗೂ ಸಿಲಿಂಡರ್ ವಿತರಿಸಲಾಯಿತು.
ಗ್ಯಾಸ್ ಒಲೆ ಹಾಗೂ ಸಿಲಿಂಡರ್ ವಿತರಿಸಿ ಮಾತನಾಡಿದ ಮಾಜಿ ಶಾಸಕ ಸಂಜಯ ಪಾಟೀಲ, ಬಿಪಿಎಲ್ ಕಾರ್ಡ ಹೊಂದಿದ ಗ್ಯಾಸ್ ಸಂಪರ್ಕವಿಲ್ಲದ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ೮ ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ ೬.೫ ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಈ ಯೋಜನೆಯ ಲಾಭ ಪಡೆಯದವರು ತಕ್ಷಣ ಯೋಜನೆಯ ಲಾಭ ಪಡೆಯಲು ಮುಂದಾಗಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಈ ಯೋಜನೆ ಅತ್ಯಂತ ಅನುಕೂಲಕರವಾಗಿದೆ ಎಂದರು.
ಮೋಹನ ತಳವಾರ, ಪುಂಡಲೀಕ ಕಾಚು ತಾರಿಹಾಳಕರ, ಮಾರುತಿ ಖೇಮನಾಳಕರ, ದತ್ತು ಗೋಜೆಕರ, ಅರುಣ ಪಾಟೀಲ, ದಾದು ಗುರವ, ಮೋಹನ ಅಂಗಡಿ, ಕಲ್ಲಪ್ಪಾ ಸಂಪಗಾಂವಿ, ವಿನಯ ಕದಮ, ಮಧು ಖೇಮನಾಳಕರ, ವಿಶಾಲ ಢುಕರೆ, ಅನೀಲ ಪಾಟೀಲ, ಲಕ್ಮಣ ಕಿಣಯೇಕರ, ವಿಠ್ಠಲ ತಾರಿಹಾಳಕರ, ಮೋಹನ ಗಿಡ್ಡು ತಳವಾರ, ಸಾವಿತ್ರಿ ಮೋಹನ ತಳವಾರ, ಸೇವಂತಾ ತಳವಾರ, ಕವಿತಾ ಸುತಾರ, ಪುಷ್ಪಾ ಪಾಟೀಲ, ರೇಣುಕಾ ಕಾಮಕರ, ಮಹಿಳಾ ಮಂಡಳದ ಸದಸ್ಯರು, ಫಲಾನುಭವಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ