* ಗುರುವಾರ ಸೆನ್ಸೆಕ್ಸ್ 574 ಪಾಯಿಂಟುಗಳ ಭಾರಿ ಕುಸಿತ ಕಂಡಿದೆ. ಸಂವೇದಿ ಸೂಚ್ಯಂಕದ ಮೂವತ್ತು ಕಂಪೆನಿಗಳಲ್ಲಿ ಕೇವಲ ಸನ್ ಫಾರ್ಮ ಮಾತ್ರ ಸ್ವಲ್ಪ ಚೇತರಿಕೆ ಕಂಡಿದ್ದು ಉಳಿದ ಇಪ್ಪತೊಂಬತ್ತು ಕಂಪನಿಗಳು ಕುಸಿತದಲ್ಲಿದ್ದವು. ಇದು ಅಂತರರಾಷ್ಟ್ರೀಯ ಕಚ್ಚಾ ತೈಲಬೆಲೆ ಇಳಿಕೆಯಾಗಿದ್ದು, ರೂಪಾಯಿಯ ಬೆಲೆ ಸ್ವಲ್ಪ ಕಡಿತಗೊಂಡಿದ್ದರು ತೈಲ ಮಾರಾಟ ಕಂಪನಿಗಳು ಸಹ ಹೆಚ್ಚಿನ ಕುಸಿತಕ್ಕೊಳಗಾದವು.
* ಮಾರುತಿ ಸುಜುಕಿ ಸುಮಾರು ರೂ.370 ರಷ್ಟು ಕುಸಿತ ಕಂಡು ರೂ.349 ರ ಕುಸಿತದೊಂದಿಗೆ ದಿನದ ಅಂತ್ಯಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಹ ರೂ..31 ರಷ್ಟು ಕುಸಿತದಿಂದ ರೂ.1,123 ರಲ್ಲಿ ಕೊನೆಗೊಂಡಿದೆ.
* ಕಚ್ಚಾ ತೈಲಬೆಲೆ ಮತ್ತು ರೂಪಾಯಿಯ ಬೆಲೆ ಭಾರತಕ್ಕೆ ಹಿತಕರವಾಗಿದ್ದರು ಸಹ ಅಂತರರಾಷ್ಟ್ರೀಯ ಪೇಟೆಗಳಲ್ಲಿನ ಏರುಪೇರುಗಳ ನೆಪದಲ್ಲಿ ಷೇರಿನ ಬೆಲೆಗಳು ಚೇತರಿಕೆ ಕಾಣದಂತಹ ಪರಿಸ್ಥಿತಿಗೆ ಪೇಟೆಗಳು ತಲುಪಿವೆ.
* ಸಾರ್ವಜನಿಕ ವಲಯದ 30 ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ ಗಳ ವಿಲೀನದ ನಿರ್ಧಾರ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಈ ಎರಡು ಕಂಪನಿ ಷೇರುಗಳು ಕುಸಿತದಲ್ಲಿವೆ.
* ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತದ ಯೋಜನೆಯಡಿ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ನ್ನು ಓ ಎನ್ ಜಿ ಸಿ ಯಲ್ಲಿ ವಿಲೀನಗೊಳಿಸದ ರೀತಿ ಇತರೆ ಕಂಪೆನಿಗಳಲ್ಲೂ ಅನುಸರಿಸಿದರೆ, ಈ ಕಂಪೆನಿಗಳಲ್ಲಿರುವ ಮೀಸಲು ನಿಧಿಯನ್ನು ನೇರವಾಗಿ ಸರ್ಕಾರ ತನ್ನ ಖಜಾನೆಗೆ ಸೇರಿಸಿಕೊಂಡಂತಾಗಿ ಅದು ಸಣ್ಣ ಹೂಡಿಕೆದಾರರ ಹಿತದ ದೃಷ್ಟಿಯಿಂದ ಸರಿಯಲ್ಲ.
* ಮೈಂಡ್ ಟ್ರೀ ಕಂಪನಿ ಷೇರಿನ ಬೆಲೆ ಇಂದು ದಿನದ ಆರಂಭದಲ್ಲಿ ರೂ.870 ರಲ್ಲಿದ್ದು ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ರೂ.911 ರವರೆಗೂ ಜಿಗಿದು ನಂತರ ಇಳಿಕೆಗೊಳಪಟ್ಟಿತು. ಅಂತ್ಯದಲ್ಲಿ ರೂ.872 ರ ಸಮೀಪ ಕೊನೆಗೊಂಡಿದೆ.
* ಮುತ್ತೊಟ್ ಫೈನಾನ್ಸ್ ಕಂಪನಿ ಷೇರು ಭಿನ್ನ ರೀತಿಯಲ್ಲಿ ಏರಿಳಿತ ಪ್ರದರ್ಶಿಸಿದೆ. ದಿನದ ಚಟುವಟಿಕೆ ಕೊನೆಗೊಳ್ಳುವುದಕ್ಕಿಂತ ಒಂದು ಗಂಟೆಗೆ ಮುಂಚೆ ರೂ.440 ರ ಸಮೀಪದಿಂದ ರೂ.389 ಕ್ಕೆ ಕುಸಿದು ನಂತರ ಅದೇ ವೇಗದಿಂದ ರೂ.444 ಕ್ಕೆ ಚೇತರಿಕೆ ಕಂಡು, ರೂ.416 ರ ಸಮೀಪ ಕೊನೆಗೊಂಡಿದೆ.
* ಷೇರುಪೇಟೆಯಲ್ಲಿ ರಿಯಲ್ ಟೈಂ ನಿರ್ಧಾರ ಒಂದೇ ಪರಿಹಾರ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ ಇಂದಿನ ಚಟುವಟಿಕೆ
-ಕೆ ಜಿ ಕೃಪಾಲ್, ಆರ್ಥಿಕ ಅಂಕಣಕಾರರು, ಬೆಂಗಳೂರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ