Election NewsKannada NewsKarnataka NewsNationalPolitics

*ಮತಗಳ್ಳತನ: ಹಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್ ಬಂದ್..?*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಮಾಡಿದರು. ಈ ಕುರಿತು ದಾಖಲೆಗಳನ್ನು ಸಹ ಬಿಡುಗಡೆ ಮಾಡಿದರು. ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತಗಳ್ಳತನ ವಿರುದ್ಧ ಬೃಹತ್ ಸಮಾವೇಶ ನಡೆಸಲಾಗಿದೆ. ಈ ಮಧ್ಯೆ ಹಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್ ಬಂದ್ ಆಗಿದೆ ಎಂದು ನೆಟ್ಟಿಗರು ಸೋಷಿಯಲ್ ಮಿಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. 

ಐದು ವಿಧಗಳಲ್ಲಿ ಮತ ಕಳ್ಳತನವಾಗಿದ್ದು, ಕರ್ನಾಟಕದ ಈ ದಾಖಲೆ ಬಿಜೆಪಿಯ ದೊಡ್ಡ ಕುತಂತ್ರಕ್ಕೆ ಸಾಕ್ಷಿಯಾಗಿದೆ. ‘2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ. ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ಸಾಥ್ ನೀಡಿದೆ’ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುಡಗಿ ನಿನ್ನೆ ದಾಖಲೆ ಬಿಡುಗಡೆ ಮಾಡಿದರು.‌

Home add -Advt

ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡಿರುವ ಬೆನ್ನಲೆ ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್ ಸ್ಥಗಿತಗೊಂಡಿದೆ ಎಂದು ಸುದ್ದಿಯಾಗುತ್ತಿದೆ.

Related Articles

Back to top button