ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು
ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ರಾಜ್ಯ ಸರಕಾರಿ ಎನ್ ಪಿಎಸ್ ನೌಕರರ ಸಂಘ ಕಿತ್ತೂರು ತಾಲೂಕು ಘಟಕದಿಂದ ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ರವೀಂದ್ರ ಜಾಧವ ಮಾತನಾಡಿ, ನೌಕರರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸದೆ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸದಂತೆ ಮಾಡಿದ್ದು ಸರಕಾರಗಳು ಕೂಡಲೇ ಈ ಯೋಜನೆನ್ನು ಹಿಂಪಡೆಯುವ ಮೂಲಕ ಹಳೆ ಪಿಂಚಣಿ ಯೊಜನೆಯನ್ನು ಜಾರಿಗೊಳಿಸಲು ಮುಂದಾಗಬೇಕು. ಪಿಂಚಣಿಯೆನ್ನುವುದು ಸರಕಾರ ಮತ್ತು ನೌಕರರ ನಡುವಿನ ಸೌಹಾರ್ಧ ಸಂಬಂಧದ ದ್ಯೋತಕವಾಗಿದ್ದು, ಯಾರೊಬ್ಬರೂ ಹೊಣೆಗಾರಿಕೆಯಿಂದ ನುಣುಚಿಕೊಳುವ ರೀತಿಯದ್ದಲ್ಲ ಎಂದರು. ಮುಖ್ಯಮಂತ್ರಿಗಳು ಹಿಂದೆ ತಾವು ಹೇಳಿದಂತೆ ಹೊಸ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿಯನ್ನು ಜಾರಿಗೊಳಿಸಿ ನೌಕರರ ಹಿತ ಕಾಪಾಡಬೇಕು. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಎನ್ ಪಿಎಸ್ ನೌಕರರು ಬೆಳಗಾವಿ ಚಲೋ ಪಾದಯಾತ್ರೆ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಎಲ್ಲ ಶಾಸಕರು ಬೆಂಬಲಿಸಿ ನೌಕರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸದನದಲ್ಲಿ ಧ್ವನಿ ಎತ್ತಬೇಕೆಂದು ಕೋರಿ ಮನವಿ ಸಲ್ಲಿಸಿದರು.
ದೀಪಾ ಕೊಪ್ಪಳ, ಎಸ್ ಸಿ ಸಿದ್ದುನವರ, ಪ್ರಕಾಶ ಹುಣಶಿಕಟ್ಟಿ, ಮಂಜುನಾಥ ಇಲ್ಲೂರ, ರವಿ ಅಮಾತಿ, ಸುನೀಲ ನರಗುಂದ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ