
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾಗಿದ್ದ ನಗರದ ಸೆಂಟ್ ಪಾಲ್ಸ್ ಪ್ರೌಢ ಶಾಲೆಯ ೯ನೇ ತರಗತಿಯ ೮ ಕರ್ನಾಟಕ ವಾಯು ದಳ ಎನ್‌ಸಿಸಿ ಬೆಳಗಾವಿ ಕೆಡೆಟ್ ಸಾರ್ಜೆಂಟ್ (ಕರ್ನಾಟಕ ಹಾಗೂ ಗೋವಾ ಡೈರೆಕ್ಟೊರೇಟ್) ಪ್ರಣೀತ ವಿ. ಕಲ್ಯಾಣಶೆಟ್ಟಿ ಎರಡು ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಆಲ್‌ಇಂಡಿಯಾ ಬೆಸ್ಟ್ ಮಾಸ್ಟರ್ ಆಫ್ ಸೆರೆಮನಿಯಲ್ಲಿ ಹಾಗೂ ಗ್ರೂಪ್ ಸಾಂಗ್ ಮುಖ್ಯ ಹಾಡುಗಾರಿಕೆಗಾಗಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪ್ರಣೀತ ವಿ. ಕಲ್ಯಾಣಶೆಟ್ಟಿ ಅವರನ್ನು ಸೆಂಟ್ ಪಾಲ್ಸ್ ಎನ್‌ಸಿಸಿ ಚೀಫ್ ಆಫೀಸರ್ ಆನಂದ ಡಿಸೋಜಾ, ಶಾಲೆಯ ಪ್ರಾಂಶುಪಾಲರು ಹಾಗೂ ವಿಂಗ್ ಕಮಾಂಡರ್ ಪಿ.ಆರ್. ಪೊನ್ನಪ್ಪ ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ