ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಏ.2ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಚರಿಸಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಎಸ್ಪಿ ದಯಾನಂದ ಎಸ್. ಪವಾರ ಹಾಗೂ ನಿವೃತ್ತ ಪಿಎಸ್ಐ ದಸ್ತಗಿರ ಎಂ ಮುಲ್ಲಾ. ಆಗಮಿಸಲಿದ್ದಾರೆ.
ಕಾರ್ಯಕ್ರದ ಅಧ್ಯಕ್ಷತೆಯನ್ನು ಉತ್ತರವಲಯ ಐಜಿಪಿ ಹೆಚ್. ಜಿ. ರಾಘವೇಂದ್ರ ಸುಹಾಸ ವಹಿಸಿಕೊಳ್ಳಲಿದ್ದಾರೆ. ಪೊಲೀಸ್ ಆಯುಕ್ತ ಬಿ ಎಸ್. ಲೋಕೇಶ ಕುಮಾರ, ಎಸ್ಪಿ ಸಿ. ಎಚ್. ಸುಧೀರ ಕುಮಾರ ರೆಡ್ಡಿ, ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋಧಾ ವಂಟಗುಡಿ ಹಾಗೂ ಬೆಳಗಾವಿ ನಗರದ ಎಲ್ಲ ಎಸಿಪಿ, ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ.