Latest

ಮನೆಯೊಳಗೆ ನುಗ್ಗಿದ ವಾಹನ; ತಪ್ಪಿದ ಭಾರೀ ಅನಾಹುತ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಪಟ್ಟಣದ ಚಿಕ್ಕಲಗಾರ ಓಣಿಯಲ್ಲಿ ಶನಿವಾರ ಮುಂಜಾನೆ 11 ಗಂಟೆಯ ವೇಳೆಗೆ ಮಹೀಂದ್ರ ಪಿಕ್-ಅಪ್ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ಮನೆಯೊಳಗೆ ನುಗ್ಗಿದ ಪರಿಣಾಮ ರಾಜು ಸಾನವಾಲೆ ಎಂಬುವವರ ಮನೆ ಹಾಗೂ ಪಕ್ಕದಲ್ಲಿ ನಿಲ್ಲಿಸಿದ್ದ ಎಕ್ಸೇಲ್ ಸ್ಕೂಟರ್ ಸಂಪೂರ್ಣವಾಗಿ ಹಾನಿಯಾಗಿದ್ದು ಮನೆಯಲ್ಲಿ ಯಾರು ಇಲ್ಲವಾಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.
ಪಟ್ಟಣದ ರೇಣುಕಾ ಸ್ಟುಡಿಯೋದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಪ್ರತಿದಿನ ಪಿಕ್ ಅಪ್ ವಾಹನಗಳನ್ನು ಚಾಲಕರು ಬಾಡಿಗೆಗಾಗಿ ನಿಲ್ಲಿಸಿರುತ್ತಾರೆ. ಅದರಂತೆ ಶನಿವಾರವೂ ಚಾಲಕನೋರ್ವ ಮಹೀಂದ್ರ ಪಿಕ್-ಅಪ್ ವಾಹನವನ್ನು ನಿಲ್ಲಿಸಿ ಕೀಯನ್ನು ಅದರಲ್ಲಿಯೇ ಬಿಟ್ಟು ಚಹಾ ಕುಡಿಯಲು ತೆರಳಿದ್ದಾನೆ.

Home add -Advt

ವಾಹನದಲ್ಲಿ ಕುಳಿತಿದ್ದ ಚಾಲಕನ ಸ್ನೇಹಿತ ಹಾಡು ಕೇಳುವ ಉದ್ದೇಶದಿಂದ ಕೀಯನ್ನು ತಿರುಗಿಸಿದ್ದು ವಾಹನವು ಏಕಾಏಕಿ ಮುಂದೆ ಸಾಗಿದ್ದು ಏನು ಮಾಡಬೇಕೆಂದು ತೋಚದೆ ವಾಹನವನ್ನು ಮನೆಯೊಳಗೆ ನುಗ್ಗಿಸಿದ್ದಾನೆ. ಮನೆಯೊಳಗೆ ಯಾರು ಇಲ್ಲವಾಗಿದ್ದರಿಂದ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಶಾಲೆಗಳಿಗೆ ಬೇಸಿಗೆಯ ರಜೆ ಇರುವುದರಿಂದ ಮಕ್ಕಳು ದಿನಂಪ್ರತಿ ಈ ಸ್ಥಳದಲ್ಲಿಯೇ ಆಟವಾಡುತ್ತಿದ್ದರು. ಆದರೆ ಈ ಘಟನೆ ನಡೆದ ಸಮಯದಲ್ಲಿ ಮಕ್ಕಳು ಇಲ್ಲದಿರುವುದು ಅದೃಷ್ಟವಶಾತ್ ದೊಡ್ಡ ದುರ್ಘಟಣೆಯೊಂದು ತಪ್ಪಿದ್ದರಿಂದ ಪೋಷಕರು ನಿರಾಳರಾಗಿದ್ದಾರೆ.
ವಾಹನದ ಚಾಲಕ ಮತ್ತು ಆತನ ಸ್ನೇಹಿತ ಪರಾರಿಯಾಗಿದ್ದು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button