ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೆಎಲ್‌ಎಸ್ ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಬೌದ್ಧಿಕ ಸಂಪನ್ಮೂಲ ಕೇಂದ್ರವು ೫೦೦ ಕೆಜಿಗು ಹೆಚ್ಚು ಹಳೆಯ ದಿನಪತ್ರಿಕೆ ಹಾಗೂ ಮಾಸಿಕಗಳನ್ನು ವಿದ್ಯಾ ಆಧಾರ ಯೋಜನೆಗೆ ದೇಣಿಗೆಯಾಗಿ ನೀಡಿತು. ವಿದ್ಯಾ ಆಧಾರ ಯೋಜನೆಯಡಿ ಜನತೆ, ಸಂಘ-ಸಂಸ್ಥೆಗಳಿಂದ ರದ್ದಿ ಪತ್ರಿಕೆಗಳನ್ನು ಸಂಗ್ರಹಿಸಿ ಅವುಗಳನ್ನು ಮಾರಿ ಸಂಗ್ರಹವಾಗುವ ಹಣದಿಂದ ಅರ್ಹ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜ ಸೇವಕ ಹಾಗೂ ಮಾಜಿ ಮಹಾಪೌರ ವಿಜಯ ಮೋರೆ, ಐಎಂಇಆರ್ ಸಂಸ್ಥೆಯ ಸಾಮಾಜಿಕ ಕಳಕಳಿ ಹಾಗೂ ಸಹಕಾರವನ್ನು ಶ್ಲಾಘಿಸಿದರು. ಐಎಂಇಆರ್ ನಿರ್ದೇಶಕ ಡಾ. ಎಸ್.ಜಿ. ಚಿನಿವಾರ ಮಾತನಾಡಿ, ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇಂಥ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಕೆಎಲ್‌ಎಸ್ ಐಎಂಇಆರ್ ಕಳೆದ ಐದು ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ರದ್ದಿ ದಾನ ನೀಡುವ ಮೂಲಕ ವಿದ್ಯಾ ಆಧಾರ ಯೋಜನೆಗೆ ಸಹಕರಿಸುತ್ತ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ