Latest

ಕರ್ನಾಟಕ ಐಎಎಸ್ ಅಧಿಕಾರಿ ಓಡಿಶಾದಲ್ಲಿ ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿ, ಭುವನೇಶ್ವರ್ (ಒಡಿಶಾ):

ನಿಯಮಾವಳಿ ಮೀರಿ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮತ್ತು ಬೆಂಗಾವಲು ಪಡೆ ವಾಹನವನ್ನು ತಪಾಸಣೆ ಮಾಡಿದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಚುನಾವಣೆ ವೀಕ್ಷಕರಾಗಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಯ್ಸಿನ್ ಅವರನ್ನು ಅಮಾನತುಗೊಳಿಸಲಾಗಿದೆ.

Related Articles

 1996ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಮೊಯ್ಸಿನ್ ಒಡಿಶಾದ ಸಂಬಲ್ ಪುರ್ ಲೋಕಸಭಾ ಕ್ಷೇತ್ರದ ಚುನಾವಣೆ ವೀಕ್ಷಕರಾಗಿದ್ದರು. ಸಂಬಲ್ ಪುರ್ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಚುನಾವಣಾ ಭಾಷಣ ಮಾಡಿದ್ದರು. ಈ ವೇಳೆ ಪ್ರಧಾನಿ ವಾಹನಗಳನ್ನು  ಮೊಹ್ಮದ್ ಮೊಹ್ಸಿನ್ ತಪಾಸಣೆ ನಡೆಸಿದ್ದರು. 

ಅವರು ಚುನಾವಣೆ ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ಮೀರಿರುವುದು ಸ್ಪಷ್ಟವಾಗಿದೆ. ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ ಪಿಜಿ) ಭದ್ರತೆ ಇರುವಂಥ ವಾಹನದ ಬಗ್ಗೆ ಇರುವ ನಿಯಮ ಮೀರಲಾಗಿದೆ. ಈ ಬಗ್ಗೆ ಸಂಬಲ್ ಪುರ್ ಜಿಲ್ಲಾಧಿಕಾರಿ, ಡಿಐಜಿ ಕೂಡ ಲಿಖಿತ ವರದಿಯನ್ನು ನೀಡಿದ್ದಾರೆ. ಲಭ್ಯ ಮಾಹಿತಿಯನ್ನು ಪರಿಗಣಿಸಿ, ಮುಂದಿನ ಆದೇಶದ ತನಕ ಮೊಹ್ಸಿನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ. 

ಈ ಮಧ್ಯೆ, ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಎಸ್ ಪಿಜಿ ಭದ್ರತೆಗೆ ಯಾವುದೇ ಅಧಿಕಾರವಿರುವುದಿಲ್ಲ. ಎಲ್ಲರೂ ಚುನಾವಣೆ ನೀತಿಸಂಹಿತೆ ಅಡಿಯಲ್ಲಿ ಬರುತ್ತಾರೆ ಎನ್ನುವ ವಾದವೂ ಕೇಳಿ ಬಂದಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button