Kannada NewsKarnataka NewsLatestPolitics

*ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಕೊಟ್ಟಿದ್ದು ಬರಿ ಚೊಂಬು: ಸಿಎಂ ಸಿದ್ದರಾಮಯ್ಯ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಕಲಬುರಗಿ: ಕೇಂದ್ರ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Home add -Advt

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬರೀ ಹೇಳಿಕೆಗಳಿಂದ ಕೂಡಿದ ಬಜೆಟ್. ಬಹಳ ನಿರಾಶಾದಾಯಕವಾಗಿದೆ. ಪರಿಷ್ಕೃತ ಆದಾಯ ಗಾತ್ರ 49 ಲಕ್ಷ 64 ಸಾವಿರ ಕೋಟಿಯಿದೆ. 1 ಲಕ್ಷ ಕೋಟಿಯಷ್ಟು ಪರಿಷ್ಕೃತ ಅಂದಾಜು ಕಡಿಮೆಯಾಗಿದೆ ಎಂದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ಕರ್ನಾಟಕಕ್ಕೆ ಕೊಟ್ಟಿದ್ದು ಬರಿ ಚೊಂಬು. ಬೆಂಗಳೂರುಗೆ ಎರಡು ರೈಲು ಘೋಷಿಸಿದ್ದಾರೆ. ಅದೂ ಇನ್ನೂ ಐದು ವರ್ಷಗಳ ನಂತರದ ಯೋಜನೆ. ಒಟ್ಟಾರೆಯಾಗಿ ರಾಜ್ಯಕ್ಕೆ ಯಾವುದೇ ಘೋಷಣೆಯನ್ನೂ ಮಾಡಿಲ್ಲ. ಇಡೀ ದಕ್ಷಿಣ ಭಾರತ ರಾಜ್ಯಕ್ಕೆ ಏನನ್ನೂ ಘೋಷಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

Back to top button