*ಯುವಕನ ಜೀವ ಕಸಿದ ಮಾಂಜಾ ದಾರ: ಮಾರಾಟಗಾರರ ಬೆನ್ನತ್ತಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಮಾಂಜಾ ದಾರ ಮಾರಾಟದ ವಿರುದ್ಧ ಮಾರ್ಕೆಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬೆಂಡಿಬಜಾರ್ನ ಅಂಗಡಿಯೊಂದರಿಂದ 10 ಬಂಡಲ್ ಮಾಂಜಾ ದಾರವನ್ನು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಬೆಂಡಿಬಜಾರ್ನ ಪುಲಭಾಗ ಗಲ್ಲಿ ನಿವಾಸಿ ಹಾಗೂ ವ್ಯಾಪಾರಿ ಮುಖೇಶ ಪಾರಸಮಾಲ ಜೈನ (42) ಅವರ ಅಂಗಡಿಯಲ್ಲಿ ಶುಕ್ರವಾರ ಪೊಲೀಸರು ತಪಾಸಣೆ ನಡೆಸಿದರು.
ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎನ್ನಲಾದ 10 ಬಂಡಲ್ ಮಾಂಜಾ ದಾರ ಪತ್ತೆಯಾಗಿದೆ. ಮಾಂಜಾ ದಾರವನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ–1963ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಬಳಿಕ ಆರೋಪಿತನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಮಾಂಜಾ ದಾರದಿಂದ ಅಪಾಯಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ಇಂತಹ ದಾರಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


