ಪ್ರಗತಿವಾಹಿನಿ ಸುದ್ದಿ, ಶಿರಸಿ
ಕಾಂಗ್ರೆಸ್ ಬತ್ತಳಿಕೆಯಲ್ಲಿ ಇರುವ ಕೊನೆಯ ಅಸ್ತ್ರ ಪ್ರಿಯಾಂಕಾ ಗಾಂಧಿಯಾಗಿದ್ದು, ಅವರೊಂದಿಗೆ ಕಾಂಗ್ರೆಸ್ ನ ಮಹಾಭಾರತ ಪೂರ್ಣ ಗೊಳ್ಳುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿಯನ್ನು ಇಂದಿರಾಗಾಂಧಿಯ ಮತ್ತೊಂದು ಅವತಾರ ಎಂದು ಸಮಾಜದಲ್ಲಿ ವರ್ಣಿಸಲಾಗುತ್ತಿದೆ. ಅವರ ಬಂಡವಾಳ ಕೂಡಾ ಇನ್ನೇನು ಬಯಲಾಗುತ್ತದೆ ಎಂದರು.
ದೇಶದ ಎಲ್ಲಾ ವ್ಯವಸ್ಥೆಯಲ್ಲಿ ಅರ್ಬನ್ ನಕ್ಸಲ್ ಗಳು ತುಂಬಿಕೊಂಡಿದ್ದಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಕಡೆಯೂ ಕಾಂಗ್ರೆಸ್ ಪಕ್ಷ ರಾಷ್ಟ್ರ ದ್ರೊಹಿಗಳನ್ನು ಇಟ್ಟಿದೆ. ಮಾಧ್ಯಮದಲ್ಲೂ ಅರ್ಬನ್ ನಕ್ಸಲ್ ಇದ್ದಾರೆ. ಎಲ್ಲೂ ಇಲ್ಲದ ನನ್ನನ್ನು ಜನಪ್ರಿಯತೆಗೆ ತಂದವರು ಮಾಧ್ಯಮದವರೆ. ‘ಅನಂತ್ ಕುಮಾರ್ ಹೆಗಡೆ ವಿವಾದಿತ ಹೇಳಿಕೆ’ ಎಂದು ಪ್ರಚಾರ ನೀಡಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಎಂದು ವ್ಯಂಗ್ಯವಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ