Latest

ಕಾಮಿಡಿ ಕಿಲಾಡಿಗಳಿಂದ ಮನರಂಜನೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಮಿಡಿ ಕಿಲಾಡಿಗಳಿಂದ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಯಾದ ಝಿ ಕನ್ನಡ ಟಿವಿಯ ಕಾಮಿಡಿ ಕಿಲಾಡಿ ಖ್ಯಾತಿಯ ನಾಗರಾಜ ಜೋರಾಪುರ ಅವರಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗೋವಿಂದ ಗೌಡ, ದಿವ್ಯಾಶ್ರೀ ಮತ್ತು ಸೂರ್ಯ ಅವರು ಮನರಂಜನೆ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಎನ್.ಜಿ.ಬಟ್ಟಲ, ಪ್ರೊ.ಎಸ್.ವಿ.ವಾಲಿಶೆಟ್ಟಿ. ಪ್ರೊ.ಬಿ.ಆಯ್.ಮಿಡಕನಟ್ಟಿ, ಪ್ರೊ.ಎಸ್.ಜಿ.ಚಿನಿವಾಲ, ಪ್ರೊ.ಆರ್.ಎ.ಚೆನ್ನವೀರ, ಪ್ರೊ.ನೈನಾ ಗಿರಿಗೌಡರ್. ಶ್ವೇತಾ ಹೆದ್ದುರಶೆಟ್ಟಿ,  ನಾಗರತ್ನಾ ಮರಿಕಟ್ಟಿ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button