Kannada NewsLatest

ಕಾರಂಜಿಮಠದಲ್ಲಿ 226ನೇ ಶಿವಾನುಭವ ಗೋಷ್ಠಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಶಿವಬಸವ ನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಜೂ.3 ರಂದು 226ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಪ್ರತಿಭಾಸಂಪನ್ನ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯುವುದು.
ಸಮಾರಂಭದ ಸಾನಿಧ್ಯವನ್ನು ಕಾರಂಜಿಮಠದ  ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಹಿಸುವರು.  ಶ್ರೀ ಶಿವಯೋಗಿ ದೇವರು ಸಮ್ಮುಖ ವಹಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಪ್ರೊ. ಎಂ. ಆರ್. ಉಳ್ಳೇಗಡ್ಡಿ ವಹಿಸುವರು. ನಿಂದಿಸಿ ನುಡಿಯದಿರಾರನು ಎಂಬ ವಿಷಯ ಕುರಿತು ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ ಗಂದಿಗವಾಡ ಇವರು ಉಪನ್ಯಾಸ ನೀಡುವರು. ಮಾತೃಮಂಡಳಿಯ ಶಿವಶರಣೆಯರಿಂದ ಸಾಮೂಹಿಕ ಪ್ರಾರ್ಥನೆ ನಡೆಯುವುದು.

Related Articles

Back to top button