Belagavi NewsBelgaum NewsKannada NewsKarnataka News

*ಗೋ ರಕ್ಷಕರನ್ನು ಮರಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಎಸ್ ಪಿ ಹೇಳಿದಿಷ್ಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ದುರಾದೃಷ್ಟಕರ್ ಘಟನೆ ನಡೆದಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದೆ. ಆ ಘಟನೆಯ ನೊಂದವರನ್ನು ಸಂಪರ್ಕಿಸಿದಾಗ ಅವರು ಸಿಕ್ಕಿಲ್ಲ. ಇದರಿಂದ ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ ಎಂದು  ಗೋ ರಕ್ಷಕರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವ ಪ್ರಕರಣದ ಕುರಿತು ಎಸ್‌ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 26 ರಂದು ಶ್ರೀರಾಮ ಸೇನೆ ಕಾರ್ಯಕರ್ತರು ವಾಹನ ತಡೆದಿರುತ್ತಾರೆ. ಐದು ಹಸುಗಳು ವಾಹನದಲ್ಲಿರುತ್ತವೆ. ಶ್ರೀರಾಮ ಸೇನೆ ಕಾರ್ಯಕರ್ತರು ವಾಹನ ಸಮೇತ ಪೊಲೀಸ್ ಠಾಣೆಗೆ ಬರ್ತಾರೆ. ಈ ವೇಳೆ ಇಬ್ಬರು ಪರಸ್ಪರ ಯಾವುದೇ ತಕರಾರು ಇರಲ್ಲ ಅಂತಾ ಪತ್ರ ಬರೆದುಕೊಟ್ಟು ಹೋಗಿರುತ್ತಾರೆ. ಆ ದಿನವೇ ಗೋವುಗಳನ್ನ ಗೋ ಶಾಲೆಗೆ ಕಳುಹಿಸಿ ಕೊಟ್ಟಿರುತ್ತಾರೆ‌. 28ರಂದು ಗೋ ಶಾಲೆಗೆ ಹೋಗಿ ದನದ ಮಾಲೀಕ ಗೋವುಗಳನ್ನು ಬಿಡಿಸಿಕೊಳ್ಳಲು ಹೋಗ್ತಾನೆ. ಆತನನ್ನ ಹಿಂಬಾಲಿಸಿಕೊಂಡು ವಾಹನದ ಮಾಲೀಕ ಬಾಬು ಸಾಬ್ ಮನೆಗೆ ನುಗ್ಗುತ್ತಾರೆ‌. ಮನೆಯಲ್ಲಿ ಹೆಣ್ಣು ಮಕ್ಕಳಿದ್ರು ಶ್ರೀರಾಮ ಸೇನೆ ಕಾರ್ಯಕರ್ತರು ನುಗ್ಗುತ್ತಾರೆ. ಈ ವೇಳೆ ಮಹಿಳೆಯರು ಕಿರುಚಿಕೊಂಡಾಗ ಪಕ್ಕದ ಜನರು ಬರ್ತಾರೆ. ಬಂದು ಎಲ್ಲರನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರ ಬಳಿ ಆ ದಿನವೇ ಇಬ್ಬರು ಯಾವುದೇ ತಂಟೆ ತಕರಾರು ಇಲ್ಲ ಅಂತಾ ಬರೆದುಕೊಟ್ಟು ಹೋಗ್ತಾರೆ. ನಿನ್ನೆ ವಿಡಿಯೋ ಹೊರ ಬಂದಾಗ ನೋಡಿ ನಮಗೂ ಬಹಳ ಬೇಜಾರು ಆಯ್ತು. ಇದೊಂದು ಘೋರ ಪ್ರಕರಣ ಆಗಿದ್ದರಿಂದ ಒಂದು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದೇವೆ ಎಂದರು.

Home add -Advt

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಇದರಲ್ಲಿ ಓರ್ವ ಹಿಂದು ಮೂರು ಜನ ಮುಸ್ಲಿಂಮರನ್ನು ಬಂದಿಸಿದ್ದೇವೆ. ಇದರಲ್ಲಿ ಮುಸ್ಲಿಮರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಲ್ಲ. ಎಲ್ಲರೂ ಸೇರಿಕೊಂಡು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದರು.

ಶಿವ ಪುತ್ರ ಸನದಿ ಡ್ರೈವರ್ ನಿಂದ ದೂರು ದಾಖಲಾಗಿದೆ ಹಾಗಾಗಿ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆ ಸೇರಿ ಇನ್ನೂಳಿದವರ ಮೇಲೂ ಎಫ್‌ಐಆರ್ ದಾಖಲಾಗಿದೆ. ಮಹಾವೀರ್ ಗೆ ಕಲಬುರಗಿಗೆ ಗಡಿ ಪಾರು ಮಾಡಲಾಗಿತ್ತು. ಗಡಿ ಪಾರಾದ ರೌಡಿ ಶೀಟರ್ ಮಹಾವೀರ್ ಇಲ್ಲಿ ಯಾಕೆ ಬಂದಿದ್ದ. ಈ ರೀತಿ ರೌಡಿ ಶೀಟರ್ ಯಾವುದೋ ಒಂದು ಸಂಘಟನೆ ಹೆಸರು ಹೇಳಿಕೊಂಡಿದ್ದಾನೆ. ಒಬ್ಬ ರೌಡಿ ಶೀಟರ್ ಗೆ ಸಂಘಟನೆಯವರು ಯಾಕೆ ಸಪೋರ್ಟ್ ಮಾಡ್ತಿದ್ದಾರೆ‌. ಇಂತವರ ಪರ ಪ್ರತಿಭಟನೆ ಮಾಡಲು ನಾವು ಅವಕಾಶ ಕೊಡಲ್ಲ ಎಂದರು‌.

Related Articles

Back to top button