Latest

ಕೇಂದ್ರದ ಬಿಜೆಪಿ ಸರ್ಕಾರದ ಬಜೆಟ್ ಶಾಕ್ ನೀಡಿದೆ -ಹೆಬ್ಬಾಳಕರ್

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅನ್ನದಾತನ ಸಾಲ ಮನ್ನಾ ಮಾಡಬಹುದು, ಮಹಿಳೆಯರ ಶಿಕ್ಷಣಕ್ಕಾಗಿ ಪಡೆದ ಸಾಲ ಮನ್ನಾ ಆಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ಕೇಂದ್ರದ ಬಿಜೆಪಿ ಸರ್ಕಾರದ ಬಜೆಟ್ ಶಾಕ್ ನೀಡಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ನಾಳಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

. ಕೇಂದ್ರದ ಬಿಜೆಪಿ ಸರ್ಕಾರ ದೇಶದ ಅನ್ನದಾತನ ಅಕೌಂಟ್ ಗೆ ಆರು ಸಾವಿರ ಜಮಾ ಮಾಡುವ ನಿರ್ಧಾರ ಕೈಗೊಂಡು ರೈತರ ಸಾಲವನ್ನು ಮನ್ನಾ ಮಾಡದೇ ರೈತರ ವಿಶ್ವಾಸ ಕಳೆದುಕೊಂಡಿದೆ

. ಯಾರಿಗೂ ಸಹಾಯ ಮಾಡದೆ, ಯಾರಿಗೂ ನೆರವು ನೀಡದೇ ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಎಲ್ಲರನ್ನೂ ಹುಚ್ವು ಮಾಡುವ ಬಜೆಟ್ ಇದಾಗಿದೆ. ಬಂಡವಾಳ ಶಾಹಿಗಳ ಪರವಾಗಿರುವ ಕೇಂದ್ರದ ಮೋದಿ ಸರ್ಕಾರ ಉಳ್ಳವರ ಬಜೆಟ್ ಮಂಡಿಸಿದ್ದಾರೆ ಎಂದು ಹೆಬ್ಬಾಳಕರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Home add -Advt

Related Articles

Back to top button