Latest

ಕೊಂಡಸಕೊಪ್ಪ ಶಾಲೆಗಳ ಕಂಪೌಂಡ್ ಉದ್ಘಾಟನೆ

*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನರೇಗಾ ಯೋಜನೆಯಡಿಯಲ್ಲಿ 9.50 ಲಕ್ಷ ರೂ. ಗಳಲ್ಲಿ ನಿರ್ಮಾಣವಾದ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಕನ್ನಡ ಹಾಗೂ ಮರಾಠಿ ಶಾಲೆಗಳ ಕಂಪೌಂಡ್ ಉದ್ಘಾಟನೆಯನ್ನು ಗ್ರಾಮೀಣ ಭಾಗದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಅಭಿವೃದ್ದಿಯಲ್ಲಿ ನನ್ನ ಮೊದಲ ಆದ್ಯತೆ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿದೆ. ಮಕ್ಕಳ ಆರೋಗ್ಯ, ಗುಣಮಟ್ಟದ ಶಿಕ್ಷಣ, ಕ್ರೀಡೆಗಳಿಗೆ ಪ್ರೋತ್ಸಾಹ, ಆಟದ ಮೈದಾನ ಇನ್ನಿತರ ಕಾರ್ಯಗಳಿಗೆ ಪ್ರಯತ್ನಿಸಲಾಗುವುದು ಎಂದರು. ಹೆಚ್ಚುವರಿ ಕೊಠಡಿಗಳ ಮಂಜೂರಾತಿ ಅವಶ್ಯಕತೆಯನ್ನು ಮನವಿ ಮೂಲಕ ಶಿಕ್ಷಕರು ತಿಳಿಸಿದರು. ಕೂಡಲೆ ಕೊಠಡಿಗಳ ಮಂಜೂರಾತಿ ಮಾಡಲಾಗುವುದು ಎಂದು ಶಾಸಕಿ ಹೇಳಿದರು. ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿದ ಗ್ರಾಮದ ದಾನಿಗಳಿಗೆ ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. ಹೀರೆಬಾಗೇವಾಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿ.ಸಿ ಪಾಟೀಲ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹೀರೆಮಠ, ಬಸ್ತವಾಡ ಗ್ರಾ.ಪಂ ಅಧ್ಯಕ್ಷೆ ಐಶ್ವರ್ಯ ಬಡವಣ್ಣವರ, ಪಿಡಿಒ ಶ್ವೇತಾ ನವೀನಕುಮಾರ್, ಅರ್ಜುನ ಪಾಟೀಲ, ಗೋಪಾಲ ಪಾಟೀಲ, ರಾಜು ಜಾಧವ, ಹೀರೆಬಾಗೇವಾಡಿ ಸಿಪಿಐ ನಾರಾಯಣ ಸ್ವಾಮಿ, ಮಹಾಂತೇಶ ಹೀರೆಮಠ, ಎಸ್‌ಡಿಎಮ್‌ಸಿ ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button