ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ರೈಲ್ವೆ ಓವರ್ ಬ್ರಿಜ್ ಉದ್ಘಾಟನೆ ವೇಳೆ ಲೋಕಸಭಾ ಸದಸ್ಯ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆಗೆ ಕಾಮನ್ ಸೆನ್ಸ್ ಇಲ್ವಾ ಎಂದು ಸಾರ್ವಜನಿಕವಾಗಿಯೇ ಪ್ರಶ್ನಿಸಿದರು.
ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಲ್ಲ ಎನ್ನುವ ಅಸಮಾಧಾನದಿಂದ ವೇದಿಕೆಗೆ ಆಗಮಿಸಲು ಪ್ರಭಾಕರ ಕೋರೆ ನಿರಾಕರಿಸಿದರು. ಆಗ ಅವರನ್ನು ಮನವೊಲಿಸಲು ಯತ್ನಿಸಿದ ಅಂಗಡಿ, ಬರಾಕ್ ತಿಳಿಯಾಂಗಿಲ್ಲಾ, ಇಷ್ಟೊಂದು ಸೀನಿಯರ್ ಆಗಿದ್ದೀರಿ, ಬಹಳ ಮಾತಾಡಬೇಡಿ. ನನಗೂ ಮಾತಾಡಲು ಬರುತ್ತದೆ. ಕಾಮನ್ ಸೆನ್ಸ್ ಇಲ್ವಾ ನಿಮಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಸಮಾಧಾನದಿಂದಲೇ ಉತ್ತರಿಸಿದ ಕೋರೆ, ದಾದಾಗಿರಿ ಮಾಡಬೇಡಿ. ನಾನು ಯಾವತ್ತೂ ಹೆಸರಿಗಾಗಿ ಹೋರಾಡಿದವನಲ್ಲ. ಆದರೆ ರಾಜ್ಯಸಭಾ ಸದಸ್ಯನಾದರೂ ನನ್ನ ಹೆಸರು ಹಾಕಿಲ್ಲ. ನಾನು ರೈಲ್ವೆ ಇಲಾಖೆ ಬಗ್ಗೆ ಹೇಳುತ್ತಿದ್ದೇನೆ. ನೀವು ಹೋಗಿ ಉದ್ಘಾಟನೆ ಮಾಡಿ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಪ್ರಭಾಕರ ಕೋರೆ ಪಕ್ಕದಲ್ಲೇ ಕುಳಿತಿದ್ದರು. ಆದರೆ ಯಾವುದಕ್ಕೂ ಪ್ರತಿಕ್ರಿಯಿಸದೆ ಮೌನ ಪ್ರೇಕ್ಷಕರಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ