ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಇಲ್ಲಿಯ ಕಾರುಕಟ್ಟೆ ಮಧ್ಯಭಾಗದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಕಾಂಪೌಂಡ್ ಗೋಡೆ ಕುಸಿದು ಹಲವಾರು ಬ್ಯಾಂಕ್ ಗ್ರಾಹಕರು ಗಾಯಗೊಂಡಿದ್ದಾರೆ.
ಸೋಮವಾರ ಮುಂಜಾನೆ ಈ ಘಟನೆ ನಡೆದಿದ್ದು, ಸರಣಿ ರಜೆಯ ಹಿನ್ನೆಲೆಯಲ್ಲಿ ಬ್ಯಾಂಕ್ ನಲ್ಲಿ ಜನದಟ್ಟಣೆ ಇತ್ತು. ಈ ವೇಳೆ ಗೋಡೆ ಕುಸಿದು ಬಿದ್ಚಾದಿದೆ. ಚಾಪಗಾವಿ ಗ್ರಾಮದ ಐವರಿಗೆ ಗಾಯವಾಗಿದ್ದು, ಒಬ್ಬರ ಕಾಲು ಸಂಪೂರ್ಣ ಜಜ್ಜಿಹೋಗಿದೆ. ಅಂಬುಲನ್ಸ್ ಆಗಮನಕ್ಕಾಗಿ ಗಾಯಾಳುಗಳು ಕಾಯುತ್ತಿದ್ದು, ಸಂಪೂರ್ಣ ಸಂಚಾರ ಅಸ್ತವ್ಯಸ್ತಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ