Kannada NewsKarnataka NewsLatest

*BREAKING: ಬೆಳಗಾವಿ: ಅಂಗನವಾಡಿ ಶಿಕ್ಷಕಿಯ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಅಂಗನವಾಡಿ ಶಿಕ್ಷಕಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ.

ಅಶ್ವಿನಿ ಪಾಟೀಲ್ ಹತ್ಯೆಯಾದ ಅಂಗನವಾಡಿ ಶಿಕ್ಷಕಿ. ಶಂಕರ್ ಪಾಟೀಲ್ ಎಂಬಾತ ಅಶ್ವಿನಿಯನ್ನು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಶಂಕರ್ ಪಾಟೀಲ್ ಅಶ್ವಿನಿಯಿಂದ 5 ಲಕ್ಷ ಸಾಲ ಪಡೆದಿದ್ದ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಅಶ್ವಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಅಶ್ವಿನಿ ಅವರ ಪತಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಮಗ ಕೂಡ ಬೇರೆ ಊರಿನಲ್ಲಿದ್ದಾನೆ. ನಂದಗಡದಲ್ಲಿ ಅಶ್ವಿನಿ ಮನೆ ಕಟ್ಟಿಸುತ್ತಿದ್ದಾಗ ಸಾಮಾನು ಸಾಗಿಸುವ ಕೆಲಸದಲ್ಲಿ ಲಾರಿ ಚಾಲಕನಾಗಿದ್ದ ಶಂಕರ್ ಪಾಟೀಲ್ ಸಹಾಯ ಮಾಡಿದ್ದ. ಹೀಗೆ ಆರಂಭವಾದ ಪರಿಚಯದಲ್ಲಿ ಶಂಕರ್ ಪಾಟೀಲ್ ಅಶ್ವಿನಿ ಬಳಿ 5 ಲಕ್ಷ ಸಾಲ ಪಡೆದಿದ್ದನಂತೆ. ಈಗ ಸಾಲದ ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದ ಶಂಕರ್ ಪಾಟೀಲ್ ಅಂತಿಮವಾಗಿ ಆಕೆಯನ್ನೇ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button