Film & EntertainmentKannada NewsKarnataka NewsLatest

*‘ಪವಿತ್ರಾ ನನ್ನ ಹೆಂಡತಿ’ ಎಂದಿದ್ದ ದರ್ಶನ್*:‌ *ನಟನ ಕ್ರೂರತ್ವ ಬಿಚ್ಚಿಟ್ಟ ಪ್ರದೋಷ್‌*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಮೊದಲ ದಿನದ ವಿಚಾರಣೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದಿದ್ದು ಯಾರು, ಶೆಡ್‌ನಲ್ಲಿ ಏನೆಲ್ಲಾ ನಡೆಯಿತು ಮತ್ತು ದರ್ಶನ್‌ ಸೇರಿದಂತೆ ಆರೋಪಿಗಳ ಪಾತ್ರದ ಬಗ್ಗೆ ಪ್ರದೋಷ್ ನ್ಯಾಯಾಲಯದ ಮುಂದೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ಬಳಿಕ ದರ್ಶನ್ ಕೂಡ ಶೆಡ್‌ಗೆ ತೆರಳಿದ್ದರು ಎಂದು ಪ್ರದೋಷ್ ಹೇಳಿಕೆ ನೀಡಿದ್ದಾರೆ. ದರ್ಶನ್‌ಗೆ ವಿಚಾರ ತಿಳಿದ ಬಳಿಕ ಕೋಪಗೊಂಡಿದ್ದು, ಶೆಡ್‌ಗೆ ಕರೆತಂದಿದ್ದ ರೇಣುಕಾಸ್ವಾಮಿಗೆ ಹೊಡೆದು ಅವಾಚ್ಯವಾಗಿ ನಿಂದಿಸಿದ್ದರು ಎಂದು ಪ್ರದೋಷ್ ನ್ಯಾಯಾಲಯದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

‘ಇವಳು ಯಾರು ಅಂತ ಗೊತ್ತಾಯ್ತಾ?’ ಎಂದು ದರ್ಶನ್ ಪ್ರಶ್ನಿಸಿದಾಗ ರೇಣುಕಾಸ್ವಾಮಿ ಕೈಮುಗಿದು ಕ್ಷಮೆ ಕೇಳಿದ್ದರು ಎಂದು ಪ್ರದೋಷ್ ಹೇಳಿದ್ದಾರೆ. ಈ ವೇಳೆ ಪವಿತ್ರಾ ಗೌಡ ಜೊತೆಗಿನ ಸಂಬಂಧದ ಬಗ್ಗೆಯೂ ದರ್ಶನ್ ಮಾತನಾಡಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಪವಿತ್ರಾ ಗೌಡ ಅವರ ಭುಜದ ಮೇಲೆ ಕೈ ಹಾಕಿ ‘ಇವಳು ನನ್ನ ಹೆಂಡ್ತಿ’ ಎಂದು ದರ್ಶನ್ ಹೇಳಿದ್ದಾಗಿ ಪ್ರದೋಷ್ ತಿಳಿಸಿದ್ದಾರೆ.

ತನ್ನ ಪತ್ನಿಗೆ ಸಂದೇಶ ಕಳುಹಿಸುವ ಧೈರ್ಯ ಹೇಗೆ ಬಂತು ಎಂದು ದರ್ಶನ್ ಪ್ರಶ್ನಿಸಿದ್ದರು. ಬಳಿಕ ರೇಣುಕಾಸ್ವಾಮಿಗೆ ಮತ್ತೆ ಹಲ್ಲೆ ನಡೆಸಿದ್ದು, ಮರ್ಮಾಂಗಕ್ಕೆ ಒದ್ದಿದ್ದರು ಎಂದು ಪ್ರದೋಷ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಪ್ರದೋಷ್ ಅವರ ಈ ಹೇಳಿಕೆಗಳನ್ನು ನ್ಯಾಯಾಲಯದ ಇನ್-ಕ್ಯಾಮೆರಾ ಪ್ರಕ್ರಿಯೆಯಲ್ಲಿ ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button