CrimeKannada NewsKarnataka NewsLatest

*ಒಂದು ಕೈಯಲ್ಲಿ ಬಂದೂಕು, ಮತ್ತೊಂದು ಕೈಯಲ್ಲಿ ರಬ್ಬರ್ ಕೋಲು*; *ಮಹಿಳಾ ಕಾರ್ಮಿಕಳನ್ನು ಮನಬಂದಂತೆ ಹೊಡೆದ ಕಾಫಿ ತೋಟದ ಮಾಲೀಕ*

ಪ್ರಗತಿವಾಹಿನಿ ಸುದ್ದಿ: ಕಾಫಿ ತೋಟದ ಕೆಲಸಕ್ಕೆಂದು ತಮಿಳುನಾಡಿನಿಂದ ಬಂದಿದ್ದ ವಲಸೆ ಮಹಿಳಾ ಕಾರ್ಮಿಕರೊಬ್ಬರನ್ನು ತೋಟದ ಮಾಲೀಕ ಮನಬಂದಂತೆ ಹೊಡೆದು ಹಿಂಸಿಸಿರುವ ಘಟನೆ ನಡೆದಿದೆ.

ಒಂದು ಕೈಯಲ್ಲಿ ಬಂದೂಕು, ಇನ್ನೊಂದು ಕೈಯಲ್ಲಿ ರಬ್ಬರ್ ದೊಣ್ಣೆ ಹಿಡಿದು ಮನಬಂದಂತೆ ಅಮಾನವೀಯವಾಗಿ ಹೊಡೆದಿದ್ದಾನೆ. ಮಹಿಳೆ ನೋವಿನಿಂದ ಒದ್ದಾಡುತ್ತಾ ಬಿಟ್ಟು ಬಿಡುವಂತೆ ಗೋಗರೆದರೂ ಕಾಫಿ ತೋಟದ ಮಾಲೀಕನ ಮನಸ್ಸು ಕರಗಲಿಲ್ಲ. ಬಿಡಿಸಲು ಬಂದ ಇನ್ನೋರ್ವ ವ್ಯಕ್ತಿಗೂ ಥಳಿಸಿದ್ದಾನೆ.

ವಲಸೆ ಕಾರ್ಮಿಕರ ಮೇಲೆ ಕಾಫಿ ಎಸ್ಟೇಟ್ ಮಾಲೀಕನ ದೌರ್ಜನ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಘಟನೆ ಚಿಕ್ಕಮಗಳೂರು ತಾಲೂಕಿನ ಬಸಗೂಡು ಗ್ರಾಮದಲ್ಲಿ ನಡೆದಿದೆ.

ಎಸ್ಟೇಟ್ ಮಾಲೀಕ ಭರತ್ ಎಂಬಾತ ದೊಣ್ಣೆಯಿಂದ ದಾಳಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಮಿಕರು ಮತ್ತು ಮಹಿಳೆಯರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಎಂದೂ ನೋಡದೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕೂಡ ದೂರಲಾಗಿದೆ.

ಕಾರ್ಮಿಕರು ತಮಿಳುನಾಡು ಮೂಲದವರು ಎನ್ನಲಾಗಿದ್ದು, ಕೆಲಸಬಿಟ್ಟು ಹೋಗುತ್ತೇವೆ ಎಂದು ಅವರು ಹೇಳಿದ ಕಾರಣ ಕುಪಿತಕೊಂಡು ಮಾಲೀಕ ಹಲ್ಲೆ ನಡೆಸಿದ್ದಾನೆ. ಮುಂಗಡವಾಗಿ ಪಡೆದಿದ್ದ ಹಣ ನೀಡುವಂತೆ ಆತ ಕೇಳಿದ್ದ. ಈ ವೇಳೆ ಕಾರ್ಮಿಕರು ಅದಕ್ಕೆ ಒಪ್ಪಿದರೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಅಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button