*82 ಪೊಲೀಸ್ ಇನ್ಸ್ಪೆಕ್ಟರ್, 19 DySP ಗಳ ದಿಢೀರ್ ವರ್ಗಾವಣೆ ವರ್ಗಾವಣೆ*: *ಬೆಳಗಾವಿ ಎಪಿಎಂಸಿ ಠಾಣೆಗೆ ಗೋಪಾಲ್ ಆರ್ ನೇಮಕ*

ಪ್ರಗತಿವಾಹಿನಿ ಸುದ್ದಿ: 82 ಪೊಲೀಸ್ ಇನ್ಸ್ಪೆಕ್ಟರ್, 19 DySP ಗಳ ದಿಢೀರ್ ವರ್ಗಾವಣೆ ವರ್ಗಾವಣೆ: ಬೆಳಗಾವಿ ಎಪಿಎಂಸಿ ಠಾಣೆಗೆ ಗೋಪಾಲ್ ಆರ್ ನೇಮಕ
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. 82 ಪೊಲೀಸ್ ಇನ್ಸ್ಪೆಕ್ಟರ್, 19 DySP ಗಳ ವರ್ಗಾವಣೆ ಹಾಗೂ ಸ್ಥಳ ನಿಯೋಜನೆಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಪೊಲೀಸ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ಮತ್ತು ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಕಚೇರಿಯಿಂದ 2026ರ ನವೆಂಬರ್ 27ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ. ಒಂದೇ ದಿನ ಎರಡು ಪ್ರತ್ಯೇಕ ಆದೇಶಗಳನ್ನು ಪ್ರಕಟಿಸಲಾಗಿದ್ದು, ಒಟ್ಟು 82 ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ 19 ಡಿವೈಎಸ್ಪಿಗಳು ಸೇರಿದಂತೆ 101 ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ಮಾಡಲಾಗಿದೆ.
ಪ್ರಮುಖ ಬದಲಾವಣೆಗಳು:
ಮೈಸೂರು ನಗರ: ಜಯರತ್ನ ಎಂ. ಅವರನ್ನು ಅಶೋಕಪುರಂ ಪೊಲೀಸ್ ಠಾಣೆಗೆ, ರೋಹಿತ್ ಸಿ.ಇ. ಅವರನ್ನು ಪೊಲೀಸ್ ತರಬೇತಿ ಶಾಲೆಗೆ ನಿಯುಕ್ತಿಗೊಳಿಸಲಾಗಿದೆ.
ದಾವಣಗೆರೆ ಜಿಲ್ಲೆ: ಸುನೀಲ್ ಕುಮಾರ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಶರಣಪ್ಪ ಎಲ್. ಹದ್ದಿ ಅವರನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ನಿಯುಕ್ತಿಗೊಳಿಸಲಾಗಿದೆ.
ಬೆಂಗಳೂರು: ಉಮೇಶ್ ಕುಮಾರ್ ಎಸ್.ಎಂ. ಅವರ ಸಿಸಿಬಿ ಬೆಂಗಳೂರು ನಗರಕ್ಕೆ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿಯೇ ಮುಂದುವರಿಸಲಾಗಿದೆ.
ಚಿಕ್ಕಬಳ್ಳಾಪುರ: ಸೂರ್ಯಪ್ರಕಾಶ್ ಎಂ. ಅವರನ್ನು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ನಿಯುಕ್ತಿಗೊಳಿಸಲಾಗಿದೆ.
ಉಡುಪಿ ಜಿಲ್ಲೆ: ಸತೀಶ್ ಎಂ.ಪಿ. ಅವರನ್ನು ಕಾರ್ಕಳ ವೃತ್ತಕ್ಕೆ ವರ್ಗಾಯಿಸಲಾಗಿದೆ.
ರಾಯಚೂರು ಜಿಲ್ಲೆ: ಹಾಲೇಶ್ ಎಂ. ಅವರನ್ನು ಮಸ್ಕಿ ವೃತ್ತಕ್ಕೆ ನಿಯುಕ್ತಿಗೊಳಿಸಲಾಗಿದೆ.
ಬೆಳಗಾವಿ: ಗೋಪಾಲ್ ಆರ್. ಅವರನ್ನು ಎಪಿಎಂಸಿ ಪೊಲೀಸ್ ಠಾಣೆಗೆ ನಿಯುಕ್ತಿಗೊಳಿಸಲಾಗಿದೆ.
ಮಹಿಳಾ ಪೊಲೀಸ್ ಠಾಣೆಗಳು: ಆಯಿಷಾ ಎಸ್. ಅವರನ್ನು ವೈಟ್ಫೀಲ್ಡ್ ಮಹಿಳಾ ಪೊಲೀಸ್ ಠಾಣೆಗೆ ಹಾಗೂ ರೇಣುಕಾ ಜೆ.ಎಂ. ಅವರನ್ನು ವಿಕಾಸಸೌಧ ಭದ್ರತಾ ವಿಭಾಗಕ್ಕೆ ನಿಯುಕ್ತಿಗೊಳಿಸಲಾಗಿದೆ.
ಇದಲ್ಲದೆ ಹಲವು ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ, ಸಿಐಡಿ, ಡಿಸಿಆರ್ಇ, ರೈಲ್ವೆ ಪೊಲೀಸ್ ಠಾಣೆಗಳು, ಸೈಬರ್ ಕ್ರೈಂ ವಿಭಾಗ ಹಾಗೂ ವಿವಿಧ ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಹೊಸ ಜವಾಬ್ದಾರಿ ನೀಡಲಾಗಿದೆ.
19 ಡಿವೈಎಸ್ಪಿಗಳ ವರ್ಗಾವಣೆ:
ಸ್ವಾಮಿ ಜಿ.ಟಿ. – ಶಿಗ್ಗಾಂವಿ ಉಪವಿಭಾಗ, ಹಾವೇರಿ ಜಿಲ್ಲೆ.
ಗುರುಶಾಂತಪ್ಪ ಕೆ. – ಡಿ.ಸಿ.ಆರ್.ಇ.
ಶ್ರೀಧರ್ ಕೆ. ಪೂಜಾರ್ – ಹುಬ್ಬಳ್ಳಿ ಗ್ರಾಮೀಣ ಉಪವಿಭಾಗ, ಧಾರವಾಡ ಜಿಲ್ಲೆ.
ಅನಿಲ್ ಕುಮಾರ್ ಹೆಚ್.ಆರ್. – ಶಿಕಾರಿಪುರ ಉಪವಿಭಾಗ, ಶಿವಮೊಗ್ಗ ಜಿಲ್ಲೆ.
ಕೇಶವ ಕೆ.ಇ. – ಡಿ.ಸಿ.ಆರ್.ಇ.
ದತ್ತಾತ್ರೇಯ – ಐಜಿಪಿ ಕಚೇರಿ, ಬಳ್ಳಾರಿ ವಲಯ.
ಪುಷ್ಪಲತಾ ಎನ್. – ಸಿಐಡಿ.
ಪ್ರಶಾಂತ್ ಜಿ. ಮುನ್ನೋಳಿ – ಸಿಐಡಿ.
ನಾಗರಾಜ ಎಂ.ಎನ್. – ಕರ್ನಾಟಕ ಲೋಕಾಯುಕ್ತ.
ನರಸಿಂಹಮೂರ್ತಿ ಪಿ. – ಕಮಾಂಡ್ ಸೆಂಟರ್, ಬೆಂಗಳೂರು ನಗರ.
ಜಾವೀದ್ ಇನಾಂದಾರ್ – ಸಿ.ಸಿ.ಪಿ.ಎಸ್., ಯಾದಗಿರಿ ಜಿಲ್ಲೆ.
ಸುನೀಲ್ ಕುಮಾರ್ ಬಿ. – ಸಿ.ಸಿ.ಪಿ.ಎಸ್., ಚಿಕ್ಕಬಳ್ಳಾಪುರ ಜಿಲ್ಲೆ.
ಪ್ರಭುಗೌಡ ಕಿರೆದಳ್ಳಿ – ಸಿ.ಸಿ.ಪಿ.ಎಸ್., ಹುಬ್ಬಳ್ಳಿ-ಧಾರವಾಡ ನಗರ.
ಗೀತಾ ಕುಲಕರ್ಣಿ – ರಾಜ್ಯ ಗುಪ್ತವಾರ್ತೆ.
ಶ್ರೀನಿವಾಸ ರೆಡ್ಡಿ ಎನ್.ಟಿ. – ರಾಜ್ಯ ಗುಪ್ತವಾರ್ತೆ.
ಉಮಾದೇವಿ ಆರ್. – ಗಿರಿನಗರ ಉಪವಿಭಾಗ, ಬೆಂಗಳೂರು ಪಶ್ಚಿಮ.
ರವಿಕುಮಾರ್ ಬಿ.ಎಂ. – ಸಂಚಾರ ಗಾಂಧಿನಗರ ಉಪವಿಭಾಗ, ಬೆಂಗಳೂರು ಕೇಂದ್ರ.
ತಬಾರಕ್ ಫಾತಿಮಾ – ಸಂಚಾರ ಇಂದಿರಾನಗರ ಉಪವಿಭಾಗ, ಬೆಂಗಳೂರು.
ಸುಶೀಲಾ ಆರ್. – ಸಂಚಾರ ಪೂರ್ವ ಉಪವಿಭಾಗ, ಬೆಂಗಳೂರು ಪೂರ್ವ.
ಬೆಂಗಳೂರಿನಲ್ಲಿ ಹೊಸ ಉಪವಿಭಾಗಗಳಿಗೆ ಅಧಿಕಾರಿಗಳ ನೇಮಕ:
ಈ ವರ್ಗಾವಣೆ ಆದೇಶದಲ್ಲಿ ಬೆಂಗಳೂರಿನ ಹೊಸದಾಗಿ ಸೃಜನೆಯಾದ ಕೆಲವು ಹುದ್ದೆಗಳಿಗೂ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ.
ಉಮಾದೇವಿ ಆರ್. ಅವರಿಗೆ ಗಿರಿನಗರ ಉಪವಿಭಾಗ, ಬೆಂಗಳೂರು ಪಶ್ಚಿಮದ ಜವಾಬ್ದಾರಿ ನೀಡಲಾಗಿದೆ.
ರವಿಕುಮಾರ್ ಬಿ.ಎಂ. ಅವರಿಗೆ ಸಂಚಾರ ಗಾಂಧಿನಗರ ಉಪವಿಭಾಗ, ಬೆಂಗಳೂರು ಕೇಂದ್ರದ ಜವಾಬ್ದಾರಿ ನೀಡಲಾಗಿದೆ.
ತಬಾರಕ್ ಫಾತಿಮಾ ಅವರಿಗೆ ಸಂಚಾರ ಇಂದಿರಾನಗರ ಉಪವಿಭಾಗದ ಜವಾಬ್ದಾರಿ ನೀಡಲಾಗಿದೆ.
ಸುಶೀಲಾ ಆರ್. ಅವರನ್ನು ಸಂಚಾರ ಪೂರ್ವ ಉಪವಿಭಾಗಕ್ಕೆ ನಿಯುಕ್ತಿಗೊಳಿಸಲಾಗಿದೆ.




