Latest

ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಬಿಜೆಪಿ ಶಾಸಕ-ಸಂಸದ

 

ಪ್ರಗತಿವಾಹಿನಿ ಸುದ್ದಿ, ಲಖನೌ:

ಬಿಜೆಪಿಯ ಶಾಸಕ ಹಾಗೂ ಸಂಸದ ಜಗಳವಾಡಿಕೊಂಡು, ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಸಂತ ಕಬೀರ ನಗರದಲ್ಲಿ ಬಿಜೆಪಿಯ ಸಂಸದ ಶರದ್ ತ್ರಿಪಾಠಿ ಹಾಗೂ ಅದೇ ಪಕ್ಷದ ಶಾಸಕ ರಾಕೇಶ್ ಸಿಂಗ್ ಬಗೇಲ್ ಅವರು ಸಭೆ ಒಂದರಲ್ಲಿ ಭಾಗವಹಿಸಿದ್ದರು. ಶಿಲಾನ್ಯಾಸಕ್ಕೆ ಹೆಸರು ಹಾಕಿಸುವ ವಿಚಾರದಲ್ಲಿ ಅವರಿಬ್ಬರ ನಡುವೆ  ವಾಗ್ವಾದ ಪ್ರಾರಂಭವಾಗಿದೆ. ಯಾರ ಹೆಸರು ಮೊದಲಿರಬೇಕು ಯಾರ ಹೆಸರು ನಂತರ ಇರಬೇಕು ಎಂದು ಅವರಿಬ್ಬರು ಜಗಳವಾಡಿದ್ದಾರೆ, ನಂತರ ಅದು ವಿಕೋಪಕ್ಕೆ ತಿರುಗಿದೆ.

ಸಭೆ ನಡೆಯುವ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಇಬ್ಬರು ಜನಪ್ರತಿನಿಧಿಗಳು ತುಂಬಿದ ಸಭೆಯಲ್ಲಿ ಅಧಿಕಾರಿಗಳು, ಮಾಧ್ಯಮದವರ ಎದುರೇ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದು, ಇಬ್ಬರ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button