ಕಳೆದ ಬಾರಿಗಿಂತ ಕಡಿಮೆ ವೆಚ್ಚ ; ಸರಕಾರಕ್ಕೆ ಹಣ ಮರಳಿಸಿದ ಪೊಲೀಸ್ ಇಲಾಖೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ೨೦೧೮ರ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆಗಾಗಿ ಒಟ್ಟು ೨ ಕೋಟಿ ೯೦ ಲಕ್ಷ ರೂ. ಹಣ ಖರ್ಚಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಭದ್ರತೆಗೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯ ಊಟೋಪಚಾರಕ್ಕೆ ೧,೭೫,೫೧,೨೧೪ ರೂ., ಸಿಸಿ ಕ್ಯಾಮೆರಾ ಅಳವಡಿಕೆಗೆ ೨೨,೨೯,೮೭೫ ರೂ., ಊಟದ ವ್ಯವಸ್ಥೆಗಾಗಿ ಪೆಂಡಾಲ್ ನಿರ್ಮಾಣದ ಖರ್ಚು ೧೮,೭೮,೯೭೩, ಕೆಎಸ್ಸಾರ್ಟಿಸಿ ಬಸ್ ಬಾಡಿಗೆ ವೆಚ್ಚ ೪೭,೦೭,೨೨೮ ರೂ. ಹಾಗೂ ೨೭,೨೪,೯೯೬ ರೂ. ಇತರೆ ವೆಚ್ಚ ಸೇರಿಸಿ ಒಟ್ಟು ೨,೯೦,೯೨,೨೮೬ ರೂ. ಖರ್ಚಾಗಿದೆ.
ಪೊಲೀಸ್ ಭದ್ರತಾ ವ್ಯವಸ್ಥೆಗಾಗಿ ರಾಜ್ಯ ಸರಕಾರವು ಮುಂಗಡವಾಗಿ ೩.೫ ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಿತ್ತು. ೨೦೧೭ ರಲ್ಲಿ ಅಧಿವೇಶನದ ಭದ್ರತೆಗೆ ಸುಮಾರು ೩ ಕೋಟಿ ೩೫ ಲಕ್ಷ ರೂ. ಹಣ ಖರ್ಚಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಈ ಬಾರಿ ೧೫ ಲಕ್ಷ ರೂ. ಹೆಚ್ಚುವರಿಯಾಗಿ ಒಟ್ಟು ೩.೫ ಕೋಟಿ ರೂ. ಮುಂಗಡ ಅನುದಾನ ನೀಡಿತ್ತು.
ಖರ್ಚಿನ ನಂತರ ಉಳಿತಾಯವಾದ ಸುಮಾರು ೫೯ ಲಕ್ಷ ರೂ. ಗಳನ್ನು ರಾಜ್ಯ ಸರಕಾರಕ್ಕೆ ಮರಳಿ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ… ಲಿಂಕ್ ಓಪನ್ ಮಾಡಿದಾಗ ಕಾಣುವ ಬೆಲ್ ಐಕಾನ್ ಒತ್ತಿ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿ, ನಿರಂತರವಾಗಿ ಸುದ್ದಿಗಳನ್ನು ಪಡೆಯಿರಿ. ಸಲಹೆ, ಸೂಚನೆ, ಸಮಸ್ಯೆಗಳಿದ್ದರೆ ಕೆಳಗೆ ಕಾಣುವ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ