*
ಪ್ರಗತಿವಾಹಿನಿ ಸುದ್ದಿ, ಅಥಣಿ
ಮುಂಬೈನಿಂದ ಬೆಂಗಳೂರಿನತ್ತ ಹೊರಟಿದ್ದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಹಳಿಯಾಳ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳಿಯಾಳ ಗ್ರಾಗ್ರಾಮಕ್ಕೆ ಹೊಂದಿಕೊಂಡ ಜತ್ತ ಜಾಂಬೋಟಿ ರಸ್ತೆ ಮೇಲೆ ಈ ಅವಘಡ ನಡೆದಿದೆ.
ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ.
ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಮತ್ತು ಮಾಲೀಕ ಪರಾರಿಯಾಗಿದ್ದಾರೆ.
ಎಸ್ ಆರ್ ಲಾರಿ ಸರ್ವಿಸ್ ಎಜೆನ್ಸಿಗೆ ಸೇರಿದ ಟ್ಯಾಂಕರ್ ಇದಾಗಿದ್ದು, ಮನೆಗಳ ಪಕ್ಕದಲ್ಲೆ ಟ್ಯಾಂಕರ್ ಪಲ್ಟಿಯಿಂದ ಗ್ರಾಮಸ್ಥತರಲ್ಲಿ ಆತಂಕ ಉಂಟಾಗಿದೆ.
ಸ್ಥಳಕ್ಕೆ ಅಥಣಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ