Latest

ಚಿಕ್ಕೋಡಿ ಬಳಿ ರೈತರ ಧರಣಿ; ಎಸಿ ಕಾರಿಗೆ ಮುತ್ತಿಗೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ

ಮಾಂಜರಿ ಸೇತುವೆ ಬಳಿ ನೀರಿಗಾಗಿ ಪ್ರತಿಭಟನೆ  ನಡೆಸುತ್ತ್ರುವ ರೈತರು ಉಪ ವಿಭಾಗಾಧಿಕಾರಿ  ಕಾರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

ಮಾಂಜರಿ ಗ್ರಾಮದ ಕೃಷ್ಣಾ ನದಿ ಪಕ್ಕದಲ್ಲಿ ರೈತರಿಂದ ಪ್ರತಿಭಟನೆ, ಧರಣಿ ನಡೆಯುತ್ತಿತ್ತು. ಈ ವೇಳೆ ಆಗಮಿಸಿದ ಚಿಕ್ಕೋಡಿ ಎಸಿ ಸೋಮಲಿಂಗ ಅವರಿಗೆ ಘೇರಾವ್ ಹಾಕಲಾಯಿತು. 

ಕೃಷ್ಣಾ ನದಿಗೆ ಕೊಯ್ನಾದಿಂದ ನೀರು ಬಿಡುವ ಸಂಬಧ  ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಸಹಾಯದಿಂದ ಉಪವಿಭಾಗಾಧಿಕಾರಿ ಅಲ್ಲಿಂದ ಹೊರಗೆ ಬಂದರು.
ಧರಣಿ: 
ಇದಕ್ಕೂ ಮೊದಲು ಸಂಕೇಶ್ವರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ತಡೆದು  ಪ್ರತಿಭಟನೆ  ನಡೆಸಿ, ಧರಣಿ ನಡಸಿದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸಹ ರೈತರೊಂದಿಗೆ ಕೆಲ ಹೊತ್ತು ಧರಣಿ ಕುಳಿತರು. 
ಕಳೆದ ಹಲವು ತಿಂಗಳಿನಿಂದ ಕೃಷ್ಣಾ ನದಿಗೆ ನೀರು ಬಿಡುವಂತೆ ಮಹಾರಾಷ್ಟ್ರಕ್ಕೆ ಮಾಡಿದ ಮನವಿಗಳೆಲ್ಲ ವ್ಯರ್ಥವಾಗುತ್ತಿವೆ. ಕಳೆದವಾರ ಸ್ವಲ್ಪ ಪ್ರಮಾಣದಲ್ಲಿ ನೀರು ಬಿಟ್ಟರೂ ಜನರಿಗೆ ಪ್ರಯೋಜನವಾಗಿಲ್ಲ.
ನೀರು ಬಿಡದಿದ್ದರೆ ಮೇ 2ರಂದು ಪ್ರತಿಭಟನೆ ಮಾಡುವುದಾಗಿ ರೈತರು ಮೊದಲೇ ಎಚ್ಚರಿಕೆ ನೀಡಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button