Latest

ಚುನಾವಣೆ ಗಲಾಟೆ: ಶಿರಸಿಯಲ್ಲಿ ಓರ್ವನ ಹತ್ಯೆ

ಪ್ರಗತಿವಾಹಿನಿ ಸುದ್ದಿ, ಶಿರಸಿ:

ಚುನಾವಣೋತ್ತರ ಹಿಂಸಾಚಾರದಲ್ಲಿ ಶಿರಸಿಯಲ್ಲಿ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದ್ದು, ಮತ್ತೋರ್ವನ  ಹತ್ಯೆಯಾಗಿದೆ.

 ಒಂದೇ ಕೋಮಿನ ಎರಡು ತಂಡಗಳ ನಡುವೆ ನಿನ್ನೆ ಸಂಜೆ ಮಾರಾಮಾರಿ ನಡೆದಿದೆ. ಆ ವೇಳೆ ಓರ್ವನಿಗೆ ಇರಿಯಲಾಗಿತ್ತು. ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಒಯ್ಯಲಾಗಿದೆ. 

Home add -Advt

ಆದರೆ, ಗಲಾಟೆ ನಡೆದ ಸ್ಥಳದಲ್ಲೇ ಬುಧವಾರ ವ್ಯಕ್ತಿಯೊಬ್ಬನ ಮೃತ ದೇಹ  ಪತ್ತೆಯಾಗಿದೆ. ಶಿರಸಿಯ ಕಸ್ತೂರಬಾ ನಗರದ ಬಯಲು ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಅಸ್ಸಲಾಂ ಬಾಬಾಜಾನ್ (22) ಎಂಬುವವನು ಕೊಲೆಯಾಗಿರುವವನು.

ಮಂಗಳವಾರ (ಏ.23)ರಾತ್ರಿ ಒಂದೇ ಕೋಮಿನ ಎರಡು ಗುಂಪುಗಳು ಕಸ್ತೂರಬಾ ನಗರದಲ್ಲಿ ಗಲಾಟೆ ಮಾಡಿಕೊಂಡಿವೆ. ಈ ವೇಳೆ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಅನೀಫ್ ತಹಸೀಲ್ದಾರ್ ಗೆ ಚಾಕು ಇರಿಯಲಾಗಿತ್ತು. ತಕ್ಷಣದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಲಾಟೆಯನ್ನು ತಹಬದಿಗೆ ತಂದಿದ್ದರು. ಇಂದು ಬೆಳಗ್ಗೆ ಮತ್ತೋರ್ವನ ಶವ ಪತ್ತೆಯಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button