ಪ್ರಗತಿವಾಹಿನಿ ಸುದ್ದಿ, ನವದೆಹಲಿ
ರಫೇಲ್ ಯುದ್ದ ವಿಮಾನ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ಹೊದಲ್ಲೆಲ್ಲ ಚೌಕಿದಾರ್ ಚೋರ್ ಹೈ ಎಂದು ಹೇಳುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನರ ಕ್ಷಮೆ ಕೋರಿದ್ದಾರೆ.
ರಾಹುಲ್ ಗಾಂಧಿ ಮೋದಿಯನ್ನುದ್ದೇಶಿಸಿ ಈ ಮಾತನ್ನು ಹೇಳುತ್ತಿದ್ದಾರೆ. ಆದರೆ ರಾಷ್ಟ್ರಾದ್ಯಂತ ಮೋದಿ ಅಭಿಮಾನಿಗಳು ನಾನೂ ಚೌಕಿದಾರ್ ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನ ಮೊದಲು ಚೌಕಿದಾರ್ ಎಂದು ಹಾಕಿಕೊಳ್ಳುತ್ತಿದ್ದಾರೆ. ರಾಷ್ಟ್ರಾದ್ಯಂತ 25 ಲಕ್ಷಕ್ಕೂ ಹೆಚ್ಚು ಜನರು ತಮ್ಮನ್ನು ಚೌಕಿದಾರ್ ಎಂದು ಕರೆದುಕೊಂಡಿದ್ದಾರೆ.
ಹಾಗಾಗಿ ಈಗ ರಾಹುಲ್ ಗಾಂಧಿ ಹೇಳಿಕೆ ಎಲ್ಲರನ್ನೂ ಘಾಸಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲೇ ಮೋದಿ ಎಲ್ಲ ಚೌಕಿದಾರರ ಕ್ಷಮೆ ಕೋರುವುದಾಗಿ ಹೇಳಿದ್ದಾರೆ. ಜೊತೆಗೆ, ಚೌಕಿದಾರ್ ಚೋರ್ ಎಂದರೆ ಯಾರೂ ಬೇಸರಪಟ್ಟುಕೊಳ್ಳಬೇಡಿ. ಇದನ್ನು ಆಭರಣ ಎನ್ನುವಂತೆ ಧರಿಸಿಕೊಳ್ಳೋಣ ಎದಿದ್ದಾರೆ. ನಮ್ಮನ್ನು ಧೈರ್ಯವಾಗಿ ಎದುರಿಸಲಾಗದೆ ೀ ರೀತಿ ಮಾತನಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ