Latest

ಜನರನ್ನು ಲೂಟಿ ಮಾಡುತ್ತಿದ್ದ ತಂಡ ಪೊಲೀಸ್ ಬಲೆಗೆ

 

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಜನರೊಂದಿಗೆ ಅನಗತ್ಯವಾಗಿ ಜಗಳ ತೆಗೆದು ನಂತರ ರಾಜಿ ಮಾಡಿಸುವ ನೆಪದಲ್ಲಿ ಹಣ ಲೂಟಿ ಮಾಡುತ್ತಿದ್ದ ಗ್ಯಾಂಗ್ ಒಂದನ್ನು  ವಡಗಾವಿ ಬಳಿ ಪೊಲೀಸರು ಬಂಧಿಸಿದ್ದಾರೆ.

ಗ್ಯಾಂಗ್ ನಲ್ಲಿ 6 ಜನರಿದ್ದು, ಅವರ ಬಳಿ ಇದ್ದ ಪಿಸ್ತೂಲ್, ತಲವಾರ್ ಮತ್ತಿತರ ಮಾರಕ ಆಯುಧಗಳನ್ನು ಸಹ ವಶಪಡಸಿಕೊಳ್ಳಲಾಗಿದೆ. ಶಹಾಪುರ ಭಾರತನಗರದ ಸಂದೀಪ್ ಅಲಿಯಾಸ್ ಸ್ಯಾಂಡಿ ಪ್ರಕಾಶ ಜಾಧವ (31), ಭಾರತನಗರದವನೇ ಆದ ದರ್ಶನ ನಾರಾಯಣ ಪಾಟೀಲ (23), ಮುತಗಾ ಮಾರುತಿ ಗಲ್ಲಿಯ ಮಾರುತಿ ಕಲ್ಲಪ್ಪ ಬಿರಾದಾರ (23), ಬೆಳಗಾವಿಯ ಅವಚಾರಹಟ್ಟಿ ವಿಟ್ಲಾಯಿ ಗಲ್ಲಿಯ ಮಹಾದೇವ ಪುಂಡಲೀಕ ತುಳಜಾಯಿ (21), ಅವಚಾರಹಟ್ಟಿಯ ಮಹೇಶ ಪರಶುರಾಮ ಮೇಲಗೆ (21), ಯಳ್ಳೂರು ರಸ್ತೆಯ ರವಿ ಯಶವಂತ ಪಾಟೀಲ (28) ಬಂಧಿತರು.

ಶಹಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾವೀದ್ ಮುಶಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಿಸಿಐಬಿಯ ಪಿಐ ಎ.ಎಸ್.ಗುದಿಗೊಪ್ಪ, ಬಿ.ಕೆ.ನದಾಫ್, ಉದಯ ಪಾಟೀಲ, ಎಸ್.ಎಲ್.ದೇಶನೂರು ಇವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button