Kannada NewsKarnataka NewsLatest

*ಟಿಸಿ ಅಳವಡಿಸುವಾಗ ದುರಂತ: ಕರೆಂಟ್ ಶಾಕ್ ಗೆ ಲೈನ್ ಮ್ಯಾನ್ ಬಲಿ*

ಪ್ರಗತಿವಾಹಿನಿ ಸುದ್ದಿ: ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಸುವಾಗ ಲೈನ್ ಮ್ಯಾನ್ ಕರೆಂಟ್ ಶಾಕ್‌ ಹೊಡೆದು ಮೃತಪಟ್ಟಿರುವ ಘಟನೆನಡೆದಿದೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಈ ದುರಣ್ತ ಸಂಭವಿಸಿದೆ. ಕೆ.ಪಿ. ಮನು (26) ಮೃತ ಕೈನ್ ಮ್ಯಾನ್. ಪತಿಯನ್ನು ಕಳೆದುಕೊಂಡಿರುವ 9 ತಿಂಗಳ ತುಂಬು ಗರ್ಭಿಣಿ ಪತ್ನಿ ಆಘಾತಕ್ಕೊಳಗಾಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದು, ಇದರಿಂದ ಲೈನ್ ಮ್ಯಾನ್ ಸಾವನ್ನಪ್ಪಿದ್ದಾಗಿ ಆರೋಪ ಕೇಳಿಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button