Latest

ಜಾರಕಿಹೊಳಿ ಕುಟುಂಬ ನಿಯಂತ್ರಿಸುತ್ತಿರುವ ವ್ಯಕ್ತಿ ಯಾರು?

ಪ್ರಗತಿವಾಹಿನಿ ಸುದ್ದಿ, ಗೋಕಾಕ

ಜಾರಕಿಹೊಳಿ ಸಹೋದರರ ಜಗಳ ಈಗ ಮತ್ತೊಂದು ತಿರುವು ಪಡೆದಿದೆ. ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ ವಿರುದ್ಧ ಸತೀಶ್ ಜಾರಕಿಹಾಳಿ ಕಿಡಿಕಾರುವ ಮೂಲಕ ಅಚ್ಛರಿಗೆ ಕಾರಣರಾಗಿದ್ದಾರೆ.

Home add -Advt

ರಮೇಶ ಜಾರಕಿಹೊಳಿ ಮಾಸ್ಟರ್ ಮೈಂಡ್ ಅವರ ಅಳಿಯ ಅಂಬಿರಾವ್ ಎಂದು ಸತೀಶ್ ಗುಡುಗಿದ್ದಾರೆ.  ರಮೇಶ ಜಾರಕಿಹೊಳಿ ಮಗನನ್ನು ಆಡಿಸಲು ಬಂದ ಅಂಬಿರಾವ್ ಜಾರಕಿಹೊಳಿ ಕುಟುಂಬವನ್ನೇ ನಿಯಂತ್ರಿಸುವಷ್ಟು ಬೆಳೆದಿದ್ದಾರೆ ಎಂದೂ ಕಿಡಿಕಾರಿದ್ದಾರೆ. 

ಅಂಬಿರಾವ್ ನಿಂದಾಗಿ ಇಡೀ ಗೋಕಾಕ ಜನರು ಬೇಸತ್ತಿದ್ದಾರೆ. ಲಖನ್ ಕೂಡ ಅದಕ್ಕಾಗಿಯೇ ರಮೇಶ ನಿಂದ ದೂರ ಸರಿದಿದ್ದಾರೆ. ಈಗಿನ ಎಲ್ಲ ರಾಜಕೀಯ ಹಾಗೂ ಕೌಟುಂಬಿಕ ಗೊಂದಲಗಳಿಗೆ ಅಂಬಿರಾವ್ ಕಾರಣ ಎಂದು ಸತೀಶ್ ಆರೋಪಿಸಿದ್ದಾರೆ. 

ಎಲ್ಲ ಅಧಿಕಾರಿಗಳು ಜಾರಕಿಹೊಳಿ ಮಾತು ಕೇಳಲ್ಲ. ಎಲ್ಲರೂ ಅಂಬಿರಾವ್ ಮಾತು ಕೇಳುತ್ತಾರೆ. ಹೆಸರಿಗೆ ಜಾರಕಿಹೊಳಿ, ಎಲ್ಲವನ್ನೂ ನಿಯಂತ್ರಿಸುವವರು ಅಂಬಿರಾವ್ ಎಂದೂ ಗುಡುಗಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button