Latest

ತಲವಾರ್ ನಿಂದ್ ಹುಟ್ಟುಹಬ್ಬದ ಕೇಕ್ ಕತ್ತರಿಸಿದ್ದ ಬಿಜೆಪಿ ಮುಖಂಡನ ಬಂಧನ

ಈ ಹಿಂದೆಯೇ ನಿಖಿಲ್ ವಿರುದ್ಧ ರೌಡಿ ಶೀಟ್ ಇತ್ತು

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ತಲವಾರ್ ನಿಂದ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬೆಳಗಾವಿ ಮಹಾನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನಿಖಿಲ್ ಮುರ್ಕುಟೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾಳಮಾರುತಿ ಠಾಣೆ ಪೊಲೀಸರು ಸೋಮವಾರ ರಾತ್ರಿ ಆತನನ್ನು ಬಂಧಿಸಿದ್ದು, 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಫೆಬ್ರವರಿ 1ರಂದು ನಿಖಿಲ್ ತನ್ನ ಹುಟ್ಟು ಹಬ್ಬ ಆಚರಿಸಿಕೊಡಿದ್ದು, ಆ ವೇಳೆ ತಲವಾರ್ ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದ. 

ವಿಶೇಷವೆಂದರೆ ಹುಟ್ಟು ಹಬ್ಬ ಆಚರಣೆಯಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಸಹ ಭಾಗವಹಿಸಿದ್ದರು. ಅನಿಲ ಬೆನಕೆ ಕೇಕ್ ಕತ್ತರಿಸುವಾಗ ನಿಖಿಲ್ ಜೊತೆ ತಲವಾರ್ ನ್ನು ಹಿಡಿದುಕೊಂಡಿದ್ದರು. ಈ ಫೋಟೋ ಮತ್ತು ವೀಡಿಯೋಗಳು ಈಗಾಗಲೆ ವೈರಲ್ ಆಗಿವೆ.

ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ನಿಖಿಲ್ ನನ್ನು ಬಂಧಿಸಲಾಗಿದ್ದು, ಆತನ ಮೇಲೆ ಈಗಾಗಲೆ ಸೆಕ್ಷನ್ 307 ಮತ್ತಿತರ ಪ್ರಕರಣಗಳಿದ್ದು, ರೌಡಿ ಶೀಟ್ ಕೂಡ ತೆರೆಯಲಾಗಿತ್ತು ಎಂದು ಎಸಿಪಿ ಎನ್.ವಿ.ಬರ್ಮನಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button