Belagavi NewsBelgaum NewsKannada NewsKarnataka NewsLatest

*ಕ್ಯಾಂಪ್ ಪೊಲೀಸರ ಭರ್ಜರಿ ಬೇಟೆ: 85 ಲಕ್ಷದ ಚಿನ್ನಾಭರಣ ವಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸರು ಮನೆ ಕಳ್ಳರನ್ನು ಬಂಧಿಸಿ 85 ಲಕ್ಷ ಮೌಲ್ಯದ ಬಂಗಾರ ಆಭರಣಗಳು ವಶಕ್ಕೆ ಪಡೆದಿದ್ದಾರೆ. 

ಶ್ರಮೇಶ ಸುರೇಶ ರೇಡೆಕರ ಎಂಬುವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ತಮ್ಮ ಮನೆಯಲ್ಲಿ ಒಟ್ಟು 981.1 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾದ ಬಗ್ಗೆ ದೂರು ಕೊಟ್ಟಿದ್ದರು. ದೂರು ದಾಖಲಿಸಿದ ತನಿಖೆ ಮಾಡಿ, ಈ ಪ್ರಕರಣದಲ್ಲಿ ಅಣ್ಣಾಪೂರ್ಣಾ ಜ್ಯೋತಿಬಾ ಬೆಳಗುಂದಕರ ಹಾಗೂ ಜ್ಯೋತಿಬಾ ಗುಂಡು ಬೆಳಗುಂದಕರ ಎಂಬ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ.

ಈ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದೂರು ನೀಡದ ವ್ಯಕ್ಯಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಒಟ್ಟು 981.1 ಗ್ರಾಂ ತೂಕದ ಬಂಗಾರದ ಆಭರಣಗಳಲ್ಲಿ ಒಟ್ಟು 877.4 ಗ್ರಾಂ ತೂಕದ ಬಂಗಾರ ಆಭರಣಗಳನ್ನು ಯಥಾವತ್ತಾಗಿ ವಶಪಡಿಸಿಕೊಂಡಿದ್ದು ಇರುತ್ತದೆ.ಅವುಗಳ ಒಟ್ಟು ಮೌಲ್ಯ 85 ಲಕ್ಷ ರೂಪಾಯಿ ಇರುತ್ತದೆ. 

ಈ ವಿಶೇಷ ತಂಡದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕೆಲಸಕ್ಕೆ ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button