Latest

ಉತ್ತರ ಕನ್ನಡ: ಕಾಲೇಜಿನ ಹಣವನ್ನೇ ದೋಚಿ ಪರಾರಿಯಾದ ಸೆಕ್ರೆಟರಿ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಪ್ರತಿಷ್ಠಿತ ಕಾಲೇಜಿಗೆ ದಾನಿಗಳು ನೀಡಿದ ಹಣವನ್ನು ಕಾಲೇಜಿನ ಸೆಕ್ರೇಟರಿಯೇ ದೋಚಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.

ಡಾ.ಎಸ್.ಬಾಳಿಗಾ ಕಾಲೇಜ್ ಆಫ್ ಆರ್ಟ್ ಆಂಡ್ ಸೈನ್ಸ್ ಕಾಲೇಜಿನ ಸೆಕ್ರೇಟರಿ ಆಗಿ ಕೆಲಸ ಮಾಡುತ್ತಿದ್ದ ಸುಧಾಕರ ನಾಯಕ ಎಂಬಾತ ಕಾಲೇಜಿನ ದುಡ್ದನ್ನು ದೋಚಿ ಪರಾರಿಯಾಗಿದ್ದಾನೆ. ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Home add -Advt

ಕಾಲೇಜಿಗೆ ದಾನಿಗಳು ನೀಡುವ ಹಣವನ್ನು ಲಪಟಾಯಿಸಲೆಂದೇ ಅಬ್ದುಲ್ ಗಫಾರ್ ಅಬ್ದುಲ್ ರೆಹಮಾನ್ ಶೇಖ್ ಎಂಬ ಹೆಸರಲ್ಲಿ ಸುಧಾಕರ್ ಬ್ಯಾಂಕ್ ಖಾತೆಯೊಂದನ್ನು ತೆಗೆದಿದ್ದ. ಅದೇ ಹೆಸರಲ್ಲಿ ಪಾನ್ ಕಾರ್ಡ್ ಕೂಡ ಮಾಡಿಸಿದ್ದ. ಈ ಖಾತೆಯಲ್ಲಿ ಒಟ್ಟು 75 ಲಕ್ಷ ಹಣ ಸಂಗ್ರಹಿಸಿದ್ದ. ಇದೀಗ ಎಲ್ಲರ ಕಣ್ಣಿಗೂ ಮಣ್ಣೆರಚಿ ಸುಧಾಕರ್ ನಾಪತ್ತೆಯಾಗಿದ್ದಾನೆ.
ನೂಪುರ್ ಶರ್ಮಾ ಹೇಳಿಕೆಗೆ ಖಂಡನೆ; ಬಿಜೆಪಿ ಕೌನ್ಸಿಲರ್ ರಾಜೀನಾಮೆ

Related Articles

Back to top button