ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಕಾಂಗ್ರೆಸ್ ನಾಯಕರ ಸಭೆಯಲ್ಲಿ ಕೆಪಿಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಆಪರೇಷನ್ ಕಮಲ್ ಬಗ್ಗೆ ತಮ್ಮಗೆ ಮಾಹಿತಿ ಬಂದಿಲ್ವಾ? ಅತೃಪ್ತ ಶಾಸಕರನ್ನ ಏಕೆ ನೀವು ಸಂಪರ್ಕ ಮಾಡುವ ಪ್ರಯತ್ನ ಮಾಡಿಲ್ಲ? ಕಳೆದು 15 ದಿನದಿಂದ 10 ಶಾಸಕರು ನಾಟ್ ರೀಚೆಬಲ್ ಆಗಿದ್ದರೂ ನೀವು ಸೀರಿಯಾಸ್ ಆಗಿಲ್ಲ? ಅತೃಪ್ತ ಶಾಸಕರನ್ನ ಸಂಪಕಕ್ಕೆ ಸಿಗುತ್ತಿಲ್ಲ ಎಂದು ಮೌನವಾಗಿದ್ದೀರಾ? ಶಾಸಕರ ಆಪ್ತರ ಮೂಲಕ ಸಂಪರ್ಕ ಮಾಡಬೇಕಿತ್ತು. ಇದರ ಪರಿಣಾಮವನ್ನು ನಾವು ಈಗ ಎದುರಿಸಬೇಕಾಗಿದೆ. ನಿಮ್ಮ ಕಾರ್ಯವೈಖರಿ ನಮಗೆ ತೃಪ್ತಿ ತಂದಿಲ್ಲ ಎಂದು ವೇಣುಗೋಪಾಲ ಸಭೆಯಲ್ಲಿ ಅಸಮಧಾನ ಹೊರಹಾಕಿದರು.
ನಮ್ಮ ಯಾವ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ? ಬಿಜೆಪಿ ನಾಯಕರ ಸಂಪರ್ಕದಲ್ಲಿರುವವರು ಯಾರು? ನಮ್ಮವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದೀರಿ? ಬಿಜೆಪಿ ಸಂಪರ್ಕದಲ್ಲಿರುವ ಶಾಸಕರು ಎಲ್ಲೆಲ್ಲಿದ್ದಾರೆ? ೧೦ ಕ್ಕೂ ಹೆಚ್ಚು ಶಾಸಕರೇನಾದ್ರೂ ಅವರ ಜೊತೆಗೆ ಹೋಗ್ತಾರಾ? ಅವರನ್ನ ಪತ್ತೆ ಹಚ್ಚುವ ಪ್ರಯತ್ನ ಹೇಗೆ ನಡೆದಿದೆ? ಸಂಪರ್ಕಕ್ಕೆ ಸಿಕ್ಕವರ ಮನವೊಲಿಸುವ ಕೆಲಸ ನಡೆದಿದ್ಯಾ? ಎಂದು ವೇಣುಗೋಪಾಲ ಕಾಂಗ್ರೆಸ್ ಮುಖಂಡರನ್ನು ವಿಚಾರಿಸಿದರು.
ನಾಲ್ಕೈದು ಮಂದಿ ಅವರ ಸಂಪರ್ಕದಲ್ಲಿದ್ದಾರಷ್ಟೇ, ಅವರನ್ನ ಮನವೊಲಿಸುವ ಪ್ರಯತ್ನ ಮಾಡ್ತಿದ್ದೇವೆ, ಯಾರೂ ಎಲ್ಲೂ ಹೋಗಲ್ಲ,ಯಾವ ಆಪರೇಷನ್ ನಡೆಯಲ್ಲ. ಬಿಜೆಪಿಯವರು ಸುಮ್ಮನೆ ರಾದ್ಧಾಂತ ಮಾಡ್ತಿದ್ದಾರೆ. ಯಾವ ಆಪರೇಷನ್ ಕಮಲವೂ ನಡೆಯಲ್ಲ. ನೀವೇನೂ ಚಿಂತೆ ಮಾಡಬೇಡಿ. ಎರಡ್ಮೂರು ದಿನ ಕಾದು ನೋಡಿ ಎಲ್ಲವೂ ಸರಿಯಾಗಲಿದೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರರು ವಿವರಿಸಿದರು.
ಇದಕ್ಕೂ ಮುನ್ನ ಕುಮಾರಕೃಪಾದಲ್ಲಿ ಶಾಸಕ ಆನಂದ್ ಸಿಂಗ್ ಜೊತೆ ವೇಣುಗೋಪಾಲ ಚರ್ಚೆ ನಡೆಸಿದರು. ನಿಮ್ಮನ್ನು ಯಾವ ಬಿಜೆಪಿ ನಾಯಕರು ಸಂಪರ್ಕಿಸಿದ್ದರು, ಯಾವಾಗ ನಿಮ್ಮ ಜೊತೆ ಮಾತನಾಡಿದ್ದರು, ಬಿಜೆಪಿಗೆ ಬರುವಂತೆ ಯಾವ ಅಮಿಷ ಒಡ್ಡಿದ್ದಾರೆ, ನಿಮ್ಮ ಜೊತೆ ಮತ್ತಿನ್ಯಾವ ಶಾಸಕರಿಗೆ ಅಮಿಷ ಒಡ್ಡಿದ್ದರು, ಅವರಿಗೆ ನೀವು ಏನಂತ ಹೇಳಿದ್ರಿ, ನೀವೇನಾದರೂ ಅಪರೇಷನ್ ಕಮಲಕ್ಕೆ ತುತ್ತಾಗಿದ್ದೀರ ಎಂದು ಆನಂದ್ ಸಿಂಗ್ ಗೆ ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ನಾನು ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಎಲ್ಲಿಯೂ ಹೋಗಲ್ಲ. ಬಿಜೆಪಿಯ ಕೆಲವರು ಅಮಿಷ ಒಡ್ಡಿದ್ದು ನಿಜ. ನಾನು ಅದನ್ನ ನಿರಾಕರಿಸಿದ್ದೇನೆ ಎಂದು ಆನಂದ ಸಿಂಗ್ ಹೇಳಿದರು.
ರಮೇಶ್ ಜಾರಕಿ ಹೋಳಿ ಯಾರ್ಯಾರನ್ನ ಸಂಪರ್ಕಿಸಿದ್ದಾರೆ ಎಷ್ಟು ಜನಶಾಸಕರು ಜಾರಕಿಹೋಳಿ ಜೊತೆ ಇದ್ದಾರೆ ಎನ್ನುವ ಕುರಿತು ಆನಂದ ಸಿಂಗ್ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡಿದರು. ಇಬ್ಬರು ಪಕ್ಷೇತರರನ್ನು ಹೊರತು ಪಡಿಸಿ ೯ ಶಾಸಕರನ್ಙು ಕರೆತರುವ ಕುರಿತು ರಮೇಶ ಜಾರಕಿಹೊಳಿ ಬಿಜೆಪಿಗೆ ಭರವಸೆ ನೀಡಿದ್ದಾರೆ. ನನ್ನ ಜೊತೆ ಒಟ್ಟು ೯ ಶಾಸಕರು ಬರಲಿದ್ದಾರೆ ಎಂದಿದ್ದಾರೆ. ವಿಶೇಷವಾಗಿ ಬಳ್ಳಾರಿಯಿಂದ ನಾಲ್ಕು ಜನ ಶಾಸಕರನ್ನ ಕರೆತರುವುದಾಗಿ ಭರವಸೆ ನೀಡಿದ್ದಾರೆ. ಆದರೆ ಗಣೇಶ್ ಹಾಗೂ ಭೀಮಾ ನಾಯಕ್ ಕೊನೆ ಗಳಿಗೆಯಲ್ಲಿ ಹಿಂದೇಟು ಹಾಕಿದ್ದು ಜಾರಕಿಹೋಳಿಗೆ ಹಿನ್ನೆಡಯಾಗಿದೆ. ರಮೇಶ್ ಜಾರಕಿಹೋಳಿ, ಮಹೇಶ್ ಕುಮ್ಟಳ್ಳಿ, ಉಮೇಶ್ ಜಾಧವ್ ಹಾಗೂ ನಾಗೇಂದ್ರ ಹೀಗೆ ನಾಲ್ಕು ಶಾಸಕರಷ್ಟೆ ಸದ್ಯಕ್ಕೆ ಆಪರೇಷನ್ ಗೆ ಒಳಗಾಗುವ ಸಾಧ್ಯತೆ ಇದೆ. ಕೊನೆ ಗಳಿಗೆಯಲ್ಲಿ ಭೀಮಾ ನಾಯಕ್, ಗಣೇಶ್, ಪ್ರತಾಪ್ ಗೌಡ ಪಾಟೀಲ್, ಬಸವರಾಜ್ ದದ್ದಲ್, ಶಿವರಾಮ್ ಹೆಬ್ಬಾರ್ ಕೈ ಎತ್ತಿದ್ದಾರೆ ಎಂದು ಆನಂದ ಸಿಂಗ್ ಮಾಹಿತಿ ನೀಡಿದ್ದಾರೆ.
ರಮೇಶ್ ಜಾರಕಿಹೋಳಿಯಿಂದ 9 ಜನ ಎಂದು ನಂಬಿಕೊಂಡಿದ್ದ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೆ ಪಕ್ಷೇತರು ಇಬ್ಬರು ಬಿಜೆಪಿ ತೆಕ್ಕೆಯಲ್ಲಿದ್ದಾರೆ. ಒಟ್ಟು 6 ಶಾಸಕರು ಇದ್ದಾರೆ. ಐಟಿ ಇಡಿ ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ರಮೇಶ್ ಜಾರಕಿಹೋಳಿ ನನ್ನನ್ನು ಕರೆದಿದ್ದಾರೆ ಎಂಬ ಮಾಹಿತಿಯನ್ನು ಆನಂದ್ ಸಿಂಗ್ ನೀಡಿದರು.
ಸಂಗಮೇಶ್, ಬಿ.ಸಿ.ಪಾಟೀಲ್ ಹಾಗೂ ಡಾ.ಸುಧಾಕರ್ ಗೆ ರಮೇಶ ಜಾರಕಿಹೊಳಿ ಪದೇ ಪದೇ ಕರೆ ಮಾಡುತ್ತಿದ್ದಾರೆ. ಜೆಡಿಎಸ್ ಶಾಸಕರಾದ ಶಿರಾದ ಸತ್ಯನಾರಾಯಣ ಹಾಗೂ ನಾಗಟಾಣದ ಶಾಸಕ ದೇವಾನಂದ್ ಚೌಹಾಣ್ ಗು ಬಿಜೆಪಿ ನಾಯಕರು ಕರೆ ಮಾಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಹೇಳಿಕೆ ನೀಡಿ, ಹರಡುತ್ತಿರುವ ಸುದ್ದಿಗೆ ರೆಕ್ಕೆಪುಕ್ಕವೇ ಇಲ್ಲ, ಅರಾಜಕತೆ ಮಾಡ್ತೇವೆ ಅಂತ ಹೊರಟಿದ್ದಾರೆ, ಅವರ ಶಾಸಕರ ಮೇಲೆ ಅವರಿಗೆ ನಂಬಿಕೆಯಿಲ್ಲ, ಅವರಿಗೆ ಅನುಭವವೂ ಆಗಿದೆ, ಸಂಕ್ರಾಂತಿ ಶಾಂತಿ ತರುತ್ತದೆ ಹೊರತು ಅರಜಾಕತೆಯನ್ನಲ್ಲ ಎಂದು ಹೇಳಿದ್ದಾರೆ.
ಆನಂದ್ ಸಿಂಗ್ ತೆರಳಿದ ಬಳಿಕ ಕಾಂಗ್ರೆಸ್ ನಾಯಕರು ಗಂಭೀರ ಚರ್ಚೆ ನಡೆಸಿದರು. ನಮ್ಮ ಐವರು ಶಾಸಕರು ಅವರ ಸಂಪರ್ಕದಲ್ಲಿದ್ದಾರೆ. ಉಳಿದವರು ಕ್ಷೇತ್ರಗಳಲ್ಲಿಯೇ ಇದ್ದಾರೆ. ಅವರು ನಮ್ಮೆಲ್ಲರ ಸಂಪರ್ಕದಲ್ಲಿದ್ದಾರೆ. ಶಂಕರ್, ನಾಗೇಶ್ ರನ್ನ ಸಂಪರ್ಕಿಸುವ ಪ್ರಯತ್ನ ನಡೆದಿದೆ. ಬಿಜೆಪಿಯವರ ಆಟ ಈ ಭಾರಿಯೂ ನಡೆಯಲ್ಲ. ನಮ್ಮಸಂಪರ್ಕದಲ್ಲಿ ನಾಲ್ಕೈದು ಬಿಜೆಪಿ ಶಾಸಕರಿದ್ದಾರೆ. ಅವರು ನಿರಂತರವಾಗಿ ನನ್ನಸಂಪರ್ಕದಲ್ಲೇ ಇದ್ದಾರೆ. ಒಂದು ವೇಳೆ ನಮ್ಮವರು ನಾಲ್ಕೈದು ಜನ ಅಲ್ಲಿಗೆ ಹೋದರೆ ನಾವು ನಾಲ್ಕೈದು ಜನ ಬಿಜೆಪಿಯವರನ್ನ ಕರೆತರುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ