Kannada NewsKarnataka NewsLatest

*ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸಾಗಿಸುತ್ತಿದ್ದ ಉದ್ಯಮಿಯ 55 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸಾಗಿಸುತ್ತಿದ್ದ 55 ಲಕ್ಷ ಹಣ ಕಳ್ಳತನವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಉದ್ಯಮಿಯೊಬ್ಬರು ಮನೆ ಮಾರಾಟದಿಂದ ಬಂದ ಹಣವನ್ನು ಬಸ್ ನಲ್ಲಿ ಕೊಂಡೊಯ್ಯುತ್ತಿದ್ದಾಗ ಕಳ್ಳರು ಈ ಹಣ ದೋಚಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಊಟಕ್ಕೆಂದು ನಿಲ್ಲಿಸಲಾಗಿತ್ತು. ಉದ್ಯಮಿ ಊಟಕ್ಕೆಂದು ಬಸ್ ನಿಂದ ಕೆಳಗಿಳಿದು ಊಟ ಮುಗಿಸಿ ಬರುವಷ್ಟರಲ್ಲಿ ಸೀಟ್ ನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿದೆ.

ಕಳುವಾದ ಹಣ ಹೈದರಾಅಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ ರಾವ್ ಅವರಿಗೆ ಸೇರಿದ್ದು. ಬೆಂಗಳೂರಿನಲ್ಲಿ ಮನೆ ಮಾರಾಟದಿಂದ ಬಂದ ಹಣವನ್ನು ಬಸ್ ನಲ್ಲಿ ಕೊಂಡೊಯ್ಯುತ್ತಿದ್ದರು. ಈ ವೇಳೆ ಹಣವನ್ನು ಕಳ್ಳರು ಕದ್ದು ಎಸ್ಕೇಪ್ ಆಗಿದ್ದಾರೆ.

ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಬಸ್ ನಲ್ಲಿದ್ದ ಹಣ ದ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ ಎಂದು ಬಸ್ ನಲ್ಲಿದ್ದ ಇತರ ಪ್ರಯಾಣಿಕರು ಹೇಳಿದ್ದಾರೆ. ಕಾರ್ನಿಂದ ಇಳಿದು ನೇರವಾಗಿ ಬಸ್ ಗೆ ನುಗ್ಗಿದ ವ್ಯಕ್ತಿ ಸೀಟ್ ನಂಬರ್ ನಾಲ್ಕರಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ ಎಂದಿದ್ದಾರೆ. ಹಣ ಕಳೆದುಕೊಂಡ ಉದ್ಯಮಿ ಪೇರಸಂದ್ರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button