Latest

ಧನಾತ್ಮಕವಾಗಿ ನೋಡಿದರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ- ಚಿಂಚಣಿ ಶ್ರೀ

   ಪ್ರಗತಿವಾಹಿನಿ ಸುದ್ದಿ, ಮಾಂಜರಿ (ಚಿಕ್ಕೋಡಿ)
ಹೊಸ ಹೊಸ ಆಲೋಚನೆಗಳು ನಮ್ಮನ್ನು ವಿನೂತನವನ್ನಾಗಿಸುತ್ತದೆ. ಆದ್ದರಿಂದ ನಾವು ಧನಾತ್ಮಕವಾಗಿ ನೋಡಿದರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ಚಿಂಚಣಿಯ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮಿಜಿ ಹೇಳಿದರು
ಅವರು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಆರ್.ಡಿ.ಎಸ್. ಸಂಸ್ಥೆಯ ಸಾಂವುಬಾಯಿ ನರವಾಡೆ ಹಿರಿಯ ಪ್ರಾಥಮಿಕ ಹಾಗೂ ಎಮ್.ಆರ್.ಡಿ.ಎಸ್. ಪ್ರೌಢ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಸದಲಗಾ ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ, ಮಾಂಜರಿ ಗ್ರಾ.ಪಂ. ಅಧ್ಯಕ್ಷ ಮಾಯಾ ಭಿಲವಡೆ, ಉಪಾಧ್ಯಕ್ಷ ಶೀತಲ ಮಗೆಣ್ಣವರ, ಯಡೂರ ಗ್ರಾ.ಪಂ. ಅಧ್ಯಕ್ಷ ಭಿಮಗೌಡಾ ಫಾಟೀಲ, ಉಪಾಧ್ಯಕ್ಷ ಲಕ್ಷ್ಮೀ ಪಿರಾಜಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಸುನೀತಾ ಭೋಜಕರ ಹಾಜರಿದ್ದರು.
ಇದೆ ವೇಳೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಹಲವು ದಾನಿಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಮಾನೆ, ಉಪಾಧ್ಯಕ್ಷ ದಿನೇಶ ಪರ್ವತಿ ಪಾಟೀಲ, ಕಾರ್ಯದರ್ಶಿ ಬಾಳಾಸಾಬ ಮಿರ್ಜೆ, ಸಂಚಾಲಕರಾದ ಸುಭಾಷ ನರವಾಡೆ, ಬಸಪ್ಪಾ ಕೋಕಣೆ, ನಿಜಗೌಡಾ ಪಾಟೀಲ, ವಿಶ್ವನಾಥ ನರವಾಡೆ, ಅಣ್ಣಪ್ಪಾ ನರವಾಡೆ, ಬಸಗೌಡಾ ಫಾಟೀಲ, ಅಣ್ಣಪ್ಪಾ ಸಂಕೇಶ್ವರಿ, ರವಿಂದ್ರ ನರವಾಡೆ, ಪರಶುರಾಮ ಮಾಳಾಯಿ, ಶಂಭುಲಿಂಗ ನರವಾಡೆ, ರಾವಸಾಬ ಗುಣಕೆ, ಮಲ್ಲಪ್ಪ ಮಾಯಣ್ಣವರ, ಮಲ್ಲಯ್ಯಾ ಜಡ, ಅಡವಯ್ಯಾ ಅರಳಿಕಟ್ಟಮಠ ಹಾಗೂ ಪಾಲಕರು ಹಾಜರಿದ್ದರು. ಕುಮದಾ ನಾಯಿಕ ಸ್ವಾಗತಿಸಿದರು. ರೇಣುಕಾ ಉಮರಾಣೆ ನಿರೂಪಿಸಿದರು. ಬಸವರಾಜ ಹೀರೇಮಠ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button