Kannada NewsKarnataka NewsLatest

*ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಬ್ರಹ್ಮಾನಂದ ಗುರೂಜಿ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಸೈಟ್ ಹಣ ವಾಪಸ್ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಮೆಳೆಕೋಟೆಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರದ ಮೆಳೆಕೋಟೆಯಲ್ಲಿರುವ ವಾಲ್ಮೀಕಿ ಗುರುಕುಲ ಪೀಠದ ಬ್ರಹ್ಮಾನಂದ ಗುರೂಜಿ ಹಾಗೂ ಆತನ ಪತ್ನಿ ಶಿಲ್ಪಾ ವಿರುದ್ಧ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Home add -Advt

ಮಹಿಳೆಯೊಬ್ಬರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದ ಬ್ರಹ್ಮಾನಂದ ಗುರೂಜಿ ಒಂದುವರ್ಷ ಕಳೆದರೂ ಸೈಟ್ ಕೊಡಿಸದೇ ಸತಾಯಿಸುತ್ತಿದ್ದರು. ಸೈಟ್ ಕೊಡಿಸಿಲ್ಲ. ಕೊಟ್ಟ ಹಣವನ್ನಾದರೂ ವಾಪಸ್ ಕೊಡುವಂತೆ ಮಹಿಳೆ ಕೇಳುತ್ತಿದ್ದಂತೆ ತನ್ನ ರೂಮಿಗೆ ಬಂದರೆ ಹಣ ಕೊಡುವುದಾಗಿ ಹೇಳಿ ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಬ್ರಹ್ಮಾನಮ್ದ ಗುರೂಜಿ. ಮಹಿಳೆಗೆ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದರಂತೆ. ಈ ಕುರಿತ ಆಡೀಯೋ ಕೂಡ ವೈರಲ್ ಆಗಿತ್ತು.

ಮಹಿಳೆಯ ಪತಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬ್ರಹ್ಮಾನಂದ ಗುರೂಜಿ ಹಾಗೂ ಆತನ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.

Related Articles

Back to top button