Latest

ನಾಯಿ ಮರಿಯಿಂದ ಲೈಂಗಿಕ ಕ್ರಿಯೆ ಮಾಡಿಸುತ್ತಿದ್ದ ವಿಕೃತ ಗಂಡನಿಗೆ 10 ವರ್ಷ ಕಠಿಣ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಾಯಿ ಮರಿಯಿಂದ ಬಲಾತ್ಕಾರವಾಗಿ ಪತ್ನಿಗೆ ಲೈಂಗಿಕ ಕ್ರಿಯೆ ಮಾಡಿಸುತ್ತಿದ್ದ ರಾಮದುರ್ಗ ತಾಲೂಕು ಹುಲಕುಂದದ ಸಂಜೀವ ಬಸವರಾಜ ಬಾಗೋಜಿ (28) ಎಂಬಾತನಿಗೆ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. 

ತಾನೂ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸುವುದಲ್ಲದೆ, ನಾಯಿ ಮರಿಯಿಂದ ಹೆಂಡತಿಗೆ ನಿರಂತರ ಲೈಂಗಿಕ ಕ್ರಿಯೆ ಮಾಡಿಸುತ್ತಿದ್ದ ಗಂಡ ತಪ್ಪಿತಸ್ಥ ಎಂದು ನ್ಯಾಯಾಲಯ ಮಂಗಳವಾರ ತೀರ್ಮಾನಿಸಿತ್ತು.  ಬುಧವಾರ ಆತನಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ. 

ವಿಚಾರಣೆ ನಡೆಸಿದ ಬೆಳಗಾವಿಯ 8ನೇ ಅಪರ ಮತ್ತು ಸತ್ರ ಜಿಲ್ಲಾ ನ್ಯಾಯಾಧೀಶ ವಿ.ಬಿ.ಸೂರ್ಯವಂಶಿ ಶಿಕ್ಷೆಯ ಪ್ರಮಾಣ ಘೋಷಿಸಿದರು. ಸರಕಾರದ ಪರವಾಗಿ ಕಿರಣ ಎಸ್.ಪಾಟೀಲ ವಾದಮಂಡಿಸಿದ್ದರು. 

Home add -Advt

ನಾಯಿ ಮರಿಯಿಂದ ಲೈಂಗಿಕ ಕ್ರಿಯೆ ಮಾಡಿಸುತ್ತಿದ್ದ ಗಂಡನಿಗೆ ಶಿಕ್ಷೆ

ಪ್ರಕರಣದ ಹಿನ್ನೆಲೆ:

ಪ್ರಕರಣ 2017ರ ಮಾರ್ಚ್ 22ರಂದು ನಡೆದಿದೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಕುಂದ ಗ್ರಾಮದ  ನಡೆದ ಘಟನೆ ಇದು. 2010ರಲ್ಲಿ ಮದುವೆಯಾಗಿದ್ದ ವ್ಯಕ್ತಿ, 2015ರಿಂದ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದ. ತಾನು ಹೇಳಿದಂತೆ ಕೇಳಬೇಕು , ಇಲ್ಲವಾದಲ್ಲಿ ಮನೆ ಬಿಟ್ಟು ಹೋಗುವಂತೆ ನಿರಂತರ ಹಿಂಸೆ ನೀಡುತ್ತಿದ್ದ. 

 

ಅನೈಸರ್ಗಿಕ ಲೈಂಗಿಕ ಕ್ರಿಯೆಯ ವೀಡಿಯೋ ಗಳನ್ನು ತೋರಿಸಿ, ಅದರಂತೆ ಮಾಡಲು ಸಹಕರಿಸುವಂತೆ ಒತ್ತಡ ಹೇರುತ್ತಿದ್ದ. ಅಷ್ಟಾದರೂ ಹೆಂಡತಿ ಆತನೊಂದಿಗೆ ಬದುಕಬೇಕೆನ್ನುವ ಉದ್ದೇಶದಿಂದ ಸಹಕರಿಸುತ್ತಿದ್ದಳು.

ಆದರೆ ಬರ ಬರುತ್ತ ಆತನ ವಿಕೃತಿ ವಿಕೋಪಕ್ಕೆ ಹೋಯಿತು. ನಾಯಿ ಮರಿ ತಂದು ಅದರಿಂದ ಹೆಂಡತಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಹಲವು ಬಾರಿ ಇದನ್ನು ಸಹಿಸಿಕೊಂಡು, ಗಂಡನ ಮನ ಪರಿವರ್ತನೆಗೆ ಯತ್ನಿಸಿ ಸೋತ ಹೆಂಡತಿ, ಯಾವಾಗ ತನ್ನನ್ನು ಹಾಗೂ ಮೂವರು ಮಕ್ಕಳನ್ನು ರಾತ್ರೋರಾತ್ರಿ ಗಂಡ ಮನೆಯಿಂದ ಹೊರದಬ್ಬಿದನೋ ಆಗ ಪೊಲೀಸ್ ಠಾಣೆ ಮೆಟ್ಟಿಲೇರಿದಳು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕಟಕೋಳ ಠಾಣೆಯ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. 

 

Related Articles

Back to top button