Kannada NewsKarnataka NewsLatestLife StyleNationalTechTravelWorld

*ಇಂದೆ ಭೂಮಿಗೆ ವಾಪಸ್ ಆಗುತ್ತಿದ್ದಾರೆ ಗಗನಯಾತ್ರಿ ಶುಭಾಂಶು ಶುಕ್ಲಾ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಗಗನಯಾತ್ರೆ ಮುಗಿಸಿ ಭೂಮಿಗೆ ವಾಪಸ್ ಬರಲು ಪ್ರಯಾಣ ಆರಂಭಿಸಿದ್ದು, ನಾಸಾದ ವೇಳಾಪಟ್ಟಿಯ ಪ್ರಕಾರ, ಜುಲೈ 15, ಅಂದರೆ ಇಂದು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸ್ಪ್ಯಾಶ್‌ಡೌನ್ ನಿರೀಕ್ಷಿಸಲಾಗಿದೆ.

ಆಕ್ಸಿಯಮ್ -4 ಮಿಷನ್’ನ ಮೂವರು ಸಹ ಸಿಬ್ಬಂದಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನಗಳನ್ನ ಕಳೆದ ನಂತರ ಶುಭಾಂಶು ಶುಕ್ಲಾ ಅವರೊಂದಿಗೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದಾರೆ.

ಭಾರತೀಯ ಕಾಲಮಾನ ಸೋಮವಾರ ಸಂಜೆ 4:50ರ ಸುಮಾರಿಗೆ ಭಾರತೀಯ ಕಾಲಮಾನ ಅವರ ಪ್ರಯಾಣ ಪ್ರಾರಂಭವಾಗಿದೆ. ನಾಸಾ ಪ್ರಕಾರ, ಅವರ ಟ್ರ್ಯಾಗನ್‌ ಬಾಹ್ಯಾಕಾಶ ನೌಕೆಯನ್ನು ಅನ್‌ಡಾಕ್ ಮಾಡಿದ ನಂತರ ಕೆಲವು ವಿಳಂಬಗಳನ್ನ ಕಾಣಿಸಿವೆ. ಆದರೆ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ ಎಂದು ನಾಸಾ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button