Kannada NewsKarnataka NewsPolitics

*ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ವೈದ್ಯೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಾಸಕ ದರ್ಶನ್ ಧ್ರುವನಾರಾಯಣ್*

ಪ್ರಗತಿವಾಹಿನಿ ಸುದ್ದಿ: ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಡಾ.ಶ್ರೀನಿಧಿ ಅವರೊಂದಿಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಡಾ.ಶ್ರೀನಿಧಿ ವೃತ್ತಿಯಲ್ಲಿ ವೈದ್ಯೆ, ದರ್ಶನ್ ಧ್ರುವನಾರಾಯಣ್ ಜನಪ್ರಿಯ ಶಾಸಕರಾಗಿದ್ದರೂ ಕೂಡ ಇಬ್ಬರೂ ಸರಳವಾಗಿ ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ.

ಜನಪ್ರತಿನಿಧಿಗಳು, ರಾಜಕಾರಣಿಗಳೆಂದರೆ ವಿವಾಹ ಸಮಾರಂಭದ ಅದ್ದೂರಿಗೆ ಕೇಳಬೇಕೆ. ಆದರೆ ಶಾಸಕರ ದರ್ಶನ್ ಧ್ರುವ ನಾರಾಯಣ್ ಅವರು ಯಾವುದೇ ಆಡಂಬರ, ಅದ್ದೂರಿತನವಿಲ್ಲದೇ ತೀರಾ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ಎಲ್ಲರ ಗಮನ ಸೆಳೆದಿದೆ.

ರಾಮನಗರದ ಹೊರವಲಯದಲ್ಲಿರುವ ಜಾನಪದಲೋಕದಲ್ಲಿ ಈ ಮದುವೆ ಸಮಾರಂಭ ನಡೆದಿದೆ. ಶಾಸಕ ದರ್ಶನ್ ಅವರು ಯಾವುದೇ ಆಡಂಬರಕ್ಕೆ ಹೋಗದೆ, ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಧು ಡಾ.ಶ್ರೀನಿಧಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಮೂಲದ ವೈದ್ಯೆಯಾಗಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದರು.


Related Articles

Back to top button