CrimeKarnataka NewsLatest

*ಸ್ನೇಹಿತನನ್ನೇ ಕೊಲೆಗೈದು ಅರ್ಧ ಸುಟ್ಟ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ದುರುಳರು*

ಪ್ರಗತಿವಾಹಿನಿ ಸುದ್ದಿ: ಹಣದ ವಿಚಾರವಾಗಿ ಆರಂಭವಾದ ಜಗಳ ಸ್ನೇಹಿತರೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘೋರ ಘಟನೆ ಬೆಳಕಿಗೆ ಬಂದಿದೆ.

ಹನುಮಂತಪ್ಪ (38) ಕೊಲೆಯಾದ ದುರ್ದೈವಿ. ಉಪೇಂದ್ರ, ಶಶಿಕುಮಾರ್, ಮಲ್ಲಿಕಾರ್ಜುನ ಹಾಗೂ ಗಂಗಾಧರ ಹನುಮಂತಪ್ಪನನ್ನು ಕೊಲೆಗೈದ ಸ್ನೇಹಿತರು.

ಹಣಕಾಸಿನ ವಿಚಾರಕ್ಕೆ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಪತಿ ಹನುಂತಪ್ಪ ಕಾಣೆಯಾಗಿರುವ ಬಗ್ಗೆ ಅಕ್ಟೋಬರ್‌ 29ರಂದು ತೆಕ್ಕಲಕೋಟೆ ಪೊಲೀಸ ಠಾಣೆಗೆ ಪತ್ನಿ ಎಸ್. ಲಕ್ಷ್ಮೀ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರಿಂದ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ.

ಒಂದು ಲಕ್ಷ ಹಣದ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹನುಮಂತಪ್ಪ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪಿಗಳು, ಬಳಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೃತದೇಹ ಸುಟ್ಟು, ಅರೆ ಬೆಂದ ಮೃತ ದೇಹವನ್ನ ತುಂಡು ತುಂಡು ಕತ್ತರಿಸಿ ಕೆರೆ ಮತ್ತು ಕಾಲುವೆಗೆ ಎಸೆದಿರೋದು ಗೊತ್ತಾಗಿದೆ. ಮೃತ ದೇಹ ಸುಡಲು ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ತೆಗೆದುಕೊಂಡು ಹೋಗುತ್ತಿರುವ ಸಿಸಿ ಕ್ಯಾಮರಾ ದೃಶ್ಯ ಕೂಡ ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿದೆ. ಇನ್ನು ಆರೋಪಿಗಳು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿರುವ ಹನುಮಂತಪ್ಪ ಮೃತದೇಹಕ್ಕಾಗಿ ಶೋಧ ಮುಂದುವರಿದೆ. ಹನುಮಂತಪ್ಪನ ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.

Related Articles

Back to top button