Latest

ನಾಳೆ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಬಾರ್ ಅಸೋಸಿಯೇಶನ್‌ಗಳ ಸಹಯೋಗದಲ್ಲಿ ಕ್ಯಾಂಟೀನ್, ಲಾ ಚೇಂಬರ್ಸ್ ಹಾಗೂ ನ್ಯಾಯಾಲಯ ಕಟ್ಟಡಗಳ ಕಾಮಗಾರಿಗೆ ಶಂಕುಸ್ಥಾಪನಾ ಸಮಾರಂಭವು ಶನಿವಾರ ಬೆಳಗ್ಗೆ 11ಕ್ಕೆ ನಗರದ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಲಿದೆ.
ನ್ಯಾಯಾಧೀಶ ರವಿ ಮಳಿಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಸತೀಶ ಜಾರಕಿಹೊಳಿ, ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಅನಿಲ ಬೆನಕೆ ಭಾಗವಹಿಸಲಿದ್ದಾರೆ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಎಸ್. ಪಾಶ್ಚಾಪುರೆ, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಕೆ.ಬಿ. ನಾಯ್ಕ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್, ರಾಜ್ಯ ಬಾರ್ ಕೌನ್ಸಿಲ್ ನಿವೃತ್ತ ಅಧ್ಯಕ್ಷ ಮತ್ತು ಸದಸ್ಯ ಎ.ಎ. ಮಗದುಮ್, ಬಾರ್ ಕೌನ್ಸಿಲ್ ಸದಸ್ಯ ವಿನಯ ಮಂಗಲೆಕರ, ಕಲ್ಮೇಶ ಟಿ.ಕೆ. ಉಪಸ್ಥಿತ ಅವರು ಉಪಸ್ಥಿತರಿರುವರು.

Related Articles

Back to top button