Belagavi NewsBelgaum NewsKannada NewsKarnataka News

ಬೆಳಗಾವಿ: ಗಾಂಜಾ ಮಾರಾಟ ಮಾಡುತ್ತಿದ್ದವ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿ, ಐನಾಕ್ಸ್ ಚಿತ್ರಮಂದಿರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಸ್ಟೇಷನ್ ವ್ಯಪ್ತಿಯ INOX ಚಿತ್ರಮಂದಿರದಿಂದ ರೈಲ್ವೆ ಸ್ಟೇಷನ್ ಹೋಗುವ ರಸ್ತೆಯಲ್ಲಿ  ವಾಸಿಮ್ ಮೆಹಬೂಬ್ ಶೇಕ್ ಸಾ. ಮಿರಜ್ ಈತನು ಅನಧಿಕೃತವಾಗಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಬಂದ ವೇಳೆಯಲ್ಲಿ ಪೊಲೀಸ್ ಇನಸ್ಪೆಕ್ಟರ್ ನಂದೀಶ್ವರ್ ಕುಂಬಾರ ನೇತೃತ್ವದಲ್ಲಿ ಸಿಬ್ಬಂದಿಗಳಾದ H S ನಿಸುನ್ನವರ, G R ಶಿರಸಂಗಿ, S B ಪಾಟೀಲ್, M M ವಡೆಯರ್,Y D ನದಾಫ್, M S ಪಾಟೀಲ್ & ಸುಭಾಷ್ ಶಿಂಗೆ ಸೇರಿ ದಾಳಿ ನಡೆಸಿ ಆರೋಪಿತನಿಂದ 2 ಕೆಜಿ ಗಾಂಜಾ, ಒಂದು ಮೊಬೈಲ್ ಫೋನ್, ಅಂದಾಜು ಕಿಮ್ಮತ್ ರೂಪಾಯಿ 55,000 ಗಳನ್ನು ಜಪ್ತಿ ಮಾಡಿದರು. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

Related Articles

Back to top button