Latest

ನೀರಿನ ವ್ಯವಸ್ಥೆ ಮಾಡಿ ಎಂದ ನಿವಾಸಿಗಳು; ಯೋಜನೆ ಮಂಜೂರಾಗಿದೆ ಎಂದ ಕಾರ್ಪೋರೇಟರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸಹ್ಯಾದ್ರಿ ನಗರ, ಸಾರಥಿ ನಗರ, ವಿದ್ಯಾನಗರ, ಪೊಲೀಸ್ ಕಾಲನಿ ಭಾಗಗಳಿಗೆ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಖಾಲಿ ಕೊಡಗಳನ್ನು ಹಿಡಿದ ಮಹಿಳೆಯರು ಕೆಲಹೊತ್ತು ಧರಣಿ ನಡೆಸಿ, ಕೂಡಲೇ ಸಮಸ್ಯೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಮೂಲಭೂತ ಅವಶ್ಯಕತೆಯಾದ ನೀರು ಪೂರೈಕೆಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೈಯಲ್ಲಿ ಫಲಕಗಳನ್ನು ಹಿಡಿದು, ಘೋಷಮೆ ಕೂಗುತ್ತ ಪ್ರತಿಭಟಿಸಿದರು.

10-12 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಎತ್ತರ ಪ್ರದೇಶದಲ್ಲಿರುವ ಈ ಬಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆ ಬಾವಿ ತೆಗೆದರೂ ಸಮರ್ಪಕ ನೀರು ಬರುತ್ತಿಲ್ಲ. ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮಹಿಳೆಯರು ದೂರಿದರು.

Home add -Advt

ಮಹಿಳೆಯರಲ್ಲದೆ, ಎಸ್.ಎಸ್.ದೇಸಾಯಿ, ನಾಗರಾಜ ಬಿ.ಕೆ. ಎಸ್.ಸಿ.ಮಾಳಿ, ಪಿ.ಐ. ಪಾಟೀಲ, ಎಸ್.ಬಿ.ಪಾಟೀಲ, ಬಿ.ೆಸ್.ಗುಂಡಕನಾಳ ಮೊದಲಾದವರು ಸಹ ಇದ್ದರು. 

 

 

ಸಹ್ಯಾದ್ರಿ ನಗರ, ಸಾರಥಿ ನಗರ, ವಿದ್ಯಾನಗರ, ಪೊಲೀಸ್ ಕಾಲನಿ ಭಾಗಗಳಿಗೆ ನೀರು ಪೂರೈಸುವ ಯೋಜನೆಗೆ  ಈಗಾಗಲೆ ಮಂಜೂರಾತಿ ಪಡೆದಿದ್ದೇನೆ. 59 ಲಕ್ಷ ರೂ. ಯೋಜನೆ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ನಡೆದಿದೆ. ಲಕ್ಷ್ಮಿಟೇಕ್ ನಿಂದ ಪೈಪ್ ಲೈನ್ ಅಳವಡಿಸುವ ಕೆಲಸಕ್ಕೆ ಕ್ಯಾಂಟೋನ್ಮೆಂಟ್ ಬೋರ್ಡ್ ಅನುಮತಿ ಬೇಕಿದ್ದು, ಅದಕ್ಕಾಗಿ ಸ್ವಲ್ಪ ವಿಳಂಬವಾಗಿದೆ. ಆದಷ್ಟು ಶೀಘ್ರ ಅನುಮತಿ ಪಡೆದು ಕೆಲಸ ನಡೆಸಲಾಗುವುದು. 

-ಅನುಶ್ರೀ ದೇಶಪಾಡೆ

Related Articles

Back to top button