ಪ್ರಗತಿವಾಹಿನಿ ಸುದ್ದಿ, ಮಾಂಜರಿ
ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಮಾಂಜರಿ, ಯಡೂರ, ಚಂದೂರ, ಇಂಗಳಿ ಹಾಗೂ ರಾಯಬಾಗ್ ತಾಲ್ಲೂಕಿನ ನಸಲಾಪುರ ಭಾವನಾ ಸೌಂದತ್ತಿ ದಿಗ್ಗೇವಾಡಿ ಜಲಾಲಪುರ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ನದಿ ತೀರದ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಇದಕ್ಕಾಗಿ ಸರಕಾರ ತಕ್ಷಣ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದ ಮುಖಾಂತರ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿದು ಬಿಡಬೇಕು. ಇಲ್ಲವಾದರೆ ಬರುವ ಮೆ ತಿಂಗಳ ಎರಡು ರಂದು ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಹತ್ತಿರ ಇರುವ ಚಿಕ್ಕೋಡಿ ಸಾಂಗ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರವಾದ ಪ್ರತಿಭಟನೆ ನಡೆಸಲಾಗುವುದೆಂದು ಗ್ರಾಮಸ್ಥರು ಚಿಕ್ಕೋಡಿ ತಹಸಿಲ್ದಾರರಿಗೆ ಎಚ್ಚರಿಸಿದ್ದಾರೆ.
ಚಿಕ್ಕೋಡಿ ತಹಸೀಲ್ದಾರ ಸಂತೋಷ ಬಿರಾದಾರ್ ಅವರಿಗೆ ಕೃಷ್ಣಾ ತೀರದ ಗ್ರಾಮಗಳ ಜನತೆಯ ಪರವಾಗಿ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ ಬನವಣೆ, ಅಜಿತರಾವ ದೇಸಾಯಿ, ಮಲ್ಲಪ್ಪ ಮೈಶಾಳೆ ಯವರ ಮುಖಂಡತ್ವದಲ್ಲಿ ಮನವಿ ನೀಡಲಾಯಿತು.
ಎರಡು ತಿಂಗಳಿಂದ ಕೃಷ್ಣಾನದಿ ಪೂರ್ಣವಾಗಿ ಬತ್ತಿ ಹೋಗಿದ್ದರಿಂದ ನದಿ ತೀರದ ಗ್ರಾಮಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಇದಕ್ಕಾಗಿ ಜನರು ಪರದಾಡುತ್ತಿದ್ದಾರೆ. ಇದರ ಜತೆಗೆ ನೀರಿನ ಅಭಾವದಿಂದ ಹೊಲ ಗದ್ದೆಗಳಲ್ಲಿರುವ ಎಲ್ಲ ಬೆಳೆಗಳು ಕಮರಿ ಹೋಗಿದ್ದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದಕ್ಕಾಗಿ ಮಹಾರಾಷ್ಟ್ರ ಸರಕಾರದ ಜತೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದಿಂದ ನಾಲ್ಕು ಟಿಎಂಸಿ ನೀರನ್ನು ಕೃಷ್ಣಾ ನದಿಯಲ್ಲಿ ಹರಿದು ಬಿಡಬೇಕು.
ಈ 30ರೊಳಗೆ ನೀರು ಬರದಿದ್ದಲ್ಲಿ ಮಾಂಜರಿ ಗ್ರಾಮದ ಹತ್ತಿರ ಇರುವ ಚಿಕ್ಕೋಡಿ -ಸಾಂಗ್ಲಿ ರಾಜ್ಯ ಹೆದ್ದಾರಿ ತಡೆದು ಉಗ್ರವಾದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಮನವಿ ನೀಡುವಾಗ ಮಾಂಜರಿ ಗ್ರಾಮದ ಅಣ್ಣ ಸಾಹೇಬ್ ಯಾದವ್, ಬಬನ ಭಿಲವೆಡೆ, ಮೋಹನ್ ಲೋಕರೆ, ರಾಮಚಂದ್ರ ಕಾಡಾಪೂರೆ, ರಾಮಚಂದ್ರ ಕದಮ, ದಾದಾ ಸಾಹೇಬ್, ಭಾಸ್ಕರ್ ರಾಮಚಂದ್ರ ಬೋಸಲೆ, ಬಂಡು ತರಾಳ, ಡಾಕ್ಟರ್ ಅಜಿತ್ ಚಿಗರೆ, ಸಂತೋಷ್ ಚಿಂಚಲೆ, ಅಮೋಲ್ ಶೆಟ್ಟಿ ಹಾಗೂ ಮಾಂಜರಿ ಯಡೂರ ಚಂದೂರ ಇಂಗಳಿ ಗ್ರಾಮದ ನೂರಾರು ಕಾರ್ಯಕರ್ತರು ಹಾಜರಿದ್ದರು.
(ಪ್ರಗತಿವಾಹಿನಿ ಸುದ್ದಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ