ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಹಿಂದವಾಡಿಯಲ್ಲಿನ ಜೈನ ಬಸದಿಯ ನೂತನೀಕರಣ ಮತ್ತು ಶ್ರೀ ೧೦೦೮ ಚಂದ್ರಪ್ರಭ, ಆದಿನಾಥ ಹಾಗೂ ೨೪ ತೀಥಂಕರರ ಪಂಚಕಲ್ಯಾಣ ಮಹಾ ಮಹೋತ್ಸವ ಕಾರ್ಯಕ್ರಮಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಅದ್ದೂರಿಯ ಚಾಲನೆ ನೀಡಲಾಯಿತು.
ಭಾನುವಾರ ಬೆಳಿಗ್ಗೆ ಮಂಗಲವಾದ್ಯದ ಮೂಲಕ ಚಾಲನೆ ಪಡೆದು ನಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಆಚಾರ್ಯರ ನಿಮಂತ್ರಣ, ನಾಂದಿ ಮಂಗಲ, ಮಂಗಲ ಸ್ನಾನ ಬಳಿಕ ಕಾರ್ಯಕ್ರಮದ ಯಜಮಾನ ಹಾಗೂ ಅವರ ಪರಿವಾರವನ್ನು ಆನೆಯ ಮೇಲೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ತದನಂತರ ಕಂಕಣ ಬಂಧನ , ವೃತಬಂಧನ, ಮಂಗಲ ಕುಂಭಾನಯನ, ಮಂಗಲ ಕುಂಭಗಳ ಮೆರವಣಿಗೆ, ನಿತ್ಯ ವಿಧಿ ಕಾರ್ಯಕ್ರಮಗಳು ನಡೆದವು.
ನಂತರ ಮಿರ್ಜಿ ದಂಪತಿಗಳಿಂದ ಧ್ವಜಾರೋಹಣ ನೆರವೇರಿತು. ಬ್ರಹ್ಮಾನಂದ ನಿಲಜಗಿ ದಂಪತಿ ಹಾಗೂ ಅವರ ಪರಿವಾರದ ವತಿಯಿಂದ ಮಂಟಪ ಉದ್ಘಾಟನೆ ನೆರವೇರಿತು. ಪಂಚಕಲ್ಯಾಣ ಮಹಾಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಭೂಷಣ ಮಿರ್ಜಿ ದಂಪತಿಗಳಿಂದ ಮಂಗಲಕಲಶ ಸ್ಥಾಪನೆ ಮಾಡಲಾಯಿತು.
ಅಖಂಡದೀಪ ಪ್ರಜ್ವಲನೆ, ಪಂಚಾಮೃತ ಅಭಿಷೇಕ, ಶಾಂತಿಮಂತ್ರ, ಪೀಠಯಂತ್ರ, ಆರಾಧನಾ, ವಾಸ್ತುವಿಧಾನ , ಶಾಂತಿ ಹೋಮ, ನವಗ್ರಹ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ಅತಿ ಉತ್ಸಾಹ ಮತ್ತು ಧಾರ್ಮಿಕ ವಾತಾವರಣದಲ್ಲಿ ನಡೆದವು.
ಶ್ರೀ ೧೦೮ ಆಚಾರ್ಯ ಧರ್ಮಸೇನ ಮತ್ತು ಶ್ರೀ ೧೦೫ ಕ್ಷುಲ್ಲಕ ಚಂದ್ರಸೇನ ಮಹಾರಾಜರ ಸಾನಿಧ್ಯದಲ್ಲಿ ಹಾಗೂ ಪ್ರತಿಷ್ಠಾಚಾರ್ಯ ಪಂಡಿತ ವೃಷಭಸೇನ ಉಪಾಧ್ಯೆ , ಸಹ ಪ್ರತಿಷ್ಠಾಚಾರ್ಯ ಪಂಡಿತ ಪಾರೀಸ ಉಪಾಧ್ಯೆ,ಪಂಡಿತ ಸಂಜೀವ ಉಪಾಧ್ಯೆ ಮತ್ತು ಉದಯಕುಮಾರ್ ಉಪಾಧ್ಯೆ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ