ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬಿಜೆಪಿ ಅವರ ಆಪರೇಷನ್ ಕಮಲ ಬಗ್ಗೆ ನಮಗೆ ಆತಂಕವಿಲ್ಲ. ನಮ್ಮ ಶಾಸಕರುಗಳ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರು ಬಿಜೆಪಿ ಸೇರುವುದಿಲ್ಲ. ಸಮ್ಮಿಶ್ರ ಸರಕಾರ ಸ್ಥಿರವಾಗಿದೆ ಎಂದು ಪರಮೇಶ್ವರ ಅವರು ಹೇಳಿದರು.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿ ಮುಖಂಡರು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಯಶ ಕಾಣುವುದಿಲ್ಲ. ದೇವಸ್ಥಾನಕ್ಕೋ ಅಥವಾ ಇತರೆ ಕಾರಣಕ್ಕೆ ನಮ್ಮ ಶಾಸಕರು ಮುಂಬೈಗೆ ತೆರಳಿರಬಹುದು. ಯಾವ ಕಾರಣಕ್ಕೆ ಎಂಬುದು ನಮಗೆ ಗೊತ್ತಿಲ್ಲ. ಅದನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸುವುದು ಬೇಡ.
ಕಾಂಗ್ರೆಸ್‌ನ ಯಾವ ಶಾಸಕರು ಬಿಜೆಪಿ ಸೇರುತ್ತೇವೆ ಎಂದು ಹೇಳಿಕೆ ನೀಡಿಲ್ಲ. ಅನಗತ್ಯವಾಗಿ ತಪ್ಪಾರ್ಥ ಮಾಡಿಕೊಳ್ಳುವುದು ಬೇಡ. ನಮ್ಮಶಾಸಕರ ಮೇಲೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ